ಸ್ಯಾಂಡಲ್ವುಡ್ ಸ್ಟಾರ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಸಂಜೆ ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಲಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಪತ್ನಿ ಗೀತಕ್ಕ, ಪುತ್ರಿ ನಿವೇದಿತಾ ಅವರ ಜೊತೆಗೆ ಅಮೆರಿಕಾಗೆ ಹೋಗುತ್ತಿದ್ದಾರೆ ನಟ ಶಿವಣ್ಣ. ಈ ವೇಳೆ ಸುದ್ದಿಗಾರರೊಂದಿಗೆ ಭಾವುಕರಾಗಿ ಮಾತಾಡಿದ್ದಾರೆ.
ಈ ಬಗ್ಗೆ ಮಾತಾಡಿದ ಶಿವಣ್ಣ, ಎಲ್ಲಾ ಚೆಕ್ ಮಾಡಿಸಲಾಗಿದೆ. ಎಲ್ಲಾ ಚೆನ್ನಾಗಿದೆ. ನಾವು ಎಷ್ಟೇ ದೊಡ್ಡ ಸ್ಟಾರ್ಗಳು ಆದ್ರು ಒಂದಷ್ಟು ಆತಂಕ ಅನ್ನೋದು ಇದ್ದೇ ಇರುತ್ತೆ. ಹೀಗಾಗಿ ಫ್ಯಾಮಿಲಿಯವರು, ಫ್ರೆಂಡ್ಸ್ ಬಂದು ಧೈರ್ಯ ಹೇಳ್ತಿದ್ದಾರೆ. 24ನೇ ತಾರೀಖು ಸರ್ಜರಿ ಆಗುತ್ತೆ. ಇಷ್ಟು ದಿನಗಳ ತನಕ ದೂರ ಇರೋದ್ರಿಂದ ಒಂದಷ್ಟು ಆತಂಕ ಇದೆ. ಡಾಕ್ಟರ್ ಮುರುಗೇಶ್ ಎಂಬುವವರು ನನಗೆ ಚಿಕಿತ್ಸೆ ನೀಡ್ತಾರೆ.
25 ಗೆ ಫ್ಲೈಟ್ ಹತ್ತಿ 26ಗೆ ನಾನು ಇಲ್ಲಿಗೆ ಬರ್ತಿನಿ. ಜನವರಿ 1ರಂದು ಮಿಸ್ ಮಾಡ್ಕೋತಿನಿ. ಎಲ್ಲರಿಗೂ ಹೊಸ ವರ್ಷ 2025 ಒಳ್ಳೆಯದನ್ನು ಮಾಡಲಿ. ಸುದೀಪ್ ಮ್ಯಾಕ್ಸ್ ಸಿನಿಮಾಗೆ ಒಳ್ಳೆಯದಾಗಲಿ. ಇಯರ್ ಎಂಡ್ ಅಲ್ಲಿ ರಿಲೀಸ್ ಆಗುತ್ತಿರೋ ಎಲ್ಲಾ ಸಿನಿಮಾಗಳಿಗೂ ಒಳ್ಳೆಯದಾಗಲಿ. ಯಾರೂ ಆತಂಕ ಪಡಬೇಕಿಲ್ಲ. ಎಲ್ಲಾ ವೈದ್ಯರೂ ಧೈರ್ಯ ತುಂಬಿದಾರೆ. ನ್ಯೂರಾಲಜಿಸ್ಟ್ ಕೂಡ ಒಂದಷ್ಟು ಸಲಹೆ ನೀಡಿದಾರೆ. ಬ್ಲಡ್ ರಿಪೋರ್ಟ್ ಸೇರಿ ಎಲ್ಲಾ ರಿಪೋರ್ಟ್ಗಳು ಪಾಸಿಟಿವ್ ಆಗಿಯೇ ಬಂದಿವೆ. ಅಭಿಮಾನಿಗಳು ಕೂಡ ನಮ್ಮ ನಿವಾಸದ ಬಳಿ ಬಂದಿದಾರೆ. ಇಂತಹ ಟೈಮಲ್ಲಿ ನಮಗೆ ಧೈರ್ಯ ಹೇಳ್ತಿದಾರೆ. ಅವರ ಪ್ರೀತಿಗೆ ಸದಾ ಚಿರರುಣಿ ಆಗಿರುತ್ತೇನೆ ಅಂತ ಭಾವುಕರಾಗಿ ಮಾತಾಡಿದ್ದಾರೆ.