ನವದೆಹಲಿ: ಮರಳಿ ಬಿಜೆಪಿಗೆ (BJP ) ಬರಬೇಕು ಅನ್ನೋದು ಪಕ್ಷದ ಎಲ್ಲರ ಆಶಯವಾಗಿತ್ತು. ಇಂದು ಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಸೇರಿದಂತೆ ಹಲವು ಹಿರಿಯ ನಾಯಕರನ್ನು ನನ್ನನ್ನು ಪ್ರೀತಿಯಿಂದ ಬರಮಾಡಿಕೊಂಡರು. ಕಾಂಗ್ರೆಸ್ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಅವರಿಗೆ ಕಳುಹಿಸಿದ್ದೇನೆ. ದೇಶದ ರಕ್ಷಣೆ, ದೇಶದ ಒಗ್ಗಡೂವಿಕೆಗಾಗಿ 10 ವರ್ಷದಿಂದ ಪ್ರಧಾನಿಗಳಾದ ಮೋದಿ ಕೆಲಸ ಮಾಡಿದ್ದಾರೆ. ಅವರ ಮರು ಆಯ್ಕೆಯಾಗಬೇಕು. ಈ ಹಿನ್ನೆಲೆ ಕಾಂಗ್ರೆಸ್ ತೊರೆಯುತ್ತಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಹೇಳಿದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಾನು ಮರಳಿ ಬರಬೇಕು ಅನ್ನೋದು ಅವರ ಆಶಯ ಆಗಿತ್ತು. ಹಾಗಾಗಿ ಬಿಜೆಪಿಗೆ ಮರಳಿ ಬಂದಿದ್ದೇನೆ.
ಅದೇ ರೀತಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಇ-ಮೇಲ್ ಮೂಲಕ ಕಳುಹಿಸಿದ್ದೇನೆ. ನೇರವಾಗಿ ಪತ್ರ ಕಳುಹಿಸಲಾಗುತ್ತದೆ ಎಂದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಾನು ಮರಳಿ ಬರಬೇಕು ಅನ್ನೋದು ಅವರ ಆಶಯ ಆಗಿತ್ತು. ಹಾಗಾಗಿ ಬಿಜೆಪಿಗೆ ಮರಳಿ ಬಂದಿದ್ದೇನೆ.