ಕಾಂಗ್ರೆಸ್ ಕೊಟ್ಟ ಗ್ಯಾರಂಟಿ ಯೋಜನೆಗಳು ಲಾಭವಾಗಿವೆಯೋ ಇಲ್ಲವೋ ಆದ್ರೆ ತಾಯಂದಿರಿಗೆ ಶಕ್ತಿ ತುಂಬಲು ಹೋಗಿ ಮಕ್ಕಳಿಗೆ ಸಂಕಷ್ಟ ತಂದಿಟ್ಟಿರೋದು ಶಕ್ತಿ ಯೋಜನೆ. ಹೌದು.. ಮಹಿಳೆಯರಿಗೆ ಶಕ್ತಿ ತುಂಬುತ್ತೇವೆ ಎಂದ ರಾಜ್ಯ ಸರ್ಕಾರವು ಈಗ ಅವರು ಹೆತ್ತ ಮಕ್ಕಳ ಜೀವ ತೆಗೆಯುತ್ತಿದೆ. ಈ ಕುರಿತಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೂಡ ಕಿಡಿಕಾರಿದ್ದಾರೆ. ಅಲ್ಲದೆ, ಶಾಲಾ ಮಕ್ಕಳಿಗೆ ಪ್ರತ್ಯೇಕ ಬಸ್ ಸೌಲಭ್ಯ ಕಲ್ಪಿಸಿ ಎಂದು ಆಗ್ರಹಿಸಿದ್ದಾರೆ.
ಇದು ಒಂದು ಊರಿನ ಸಮಸ್ಯೆಯಲ್ಲ, ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಬಸ್ ಸಂಕಷ್ಟ ಶುರುವಾಯ್ತು. ಟೈಮಿಗೆ ಸರಿಯಾಗಿ ಶಾಲಾ ಕಾಲೇಜಿಗೆ ತಲುಪಲಾಗದೆ ಪಾಠ ಪ್ರವಚನಗಳು ಕೂಡ ಮಿಸ್ ಆಗ ತೊಡಗಿದ್ವು. ಇನ್ನು ಬರೋ ಒಂದೋ ಎರಡೋ ಬಸ್ಸು..ಅವು ಸಮಯಕ್ಕೆ ಸರಿಯಾಗಿಲ್ಲ..ಇನ್ನು ಬಸ್ ಬಂದ್ರು, ಆ ರಶ್ ನಲ್ಲಿ ವಿದ್ಯಾರ್ಥಿನಿಯರು ಬಸ್ ಹತ್ತೋದು ಮತ್ತೂ ಒಂದು ಪ್ರಯಾಸ..
ಚುನಾವಣೆ ಲಾಭಕ್ಕಾಗಿ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿ ಕೊಟ್ಟ ಶಕ್ತಿ ಯೋಜನೆ ಅಡ್ಡ ಪರಿಣಾಮ ಉಂಟು ಮಾಡುತ್ತಿದ್ರು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೈಲೆಂಟ್ ಆಗಿ ಬಿಟ್ಟಿದ್ದಾರೆ. ಈ ಕುರಿತು ಎಲ್ಲಿಯೂ ತುಟಿ ಬಿಚ್ಚಿಲ್ಲ..ಬದಲಿ ವ್ಯವಸ್ಥೆ ಮಾಡೋದರ ಬಗ್ಗೆಯೂ ಯೋಚಿಸಿಲ್ಲ ಅನ್ನೋದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಶಕ್ತಿ ಯೋಜನೆಯ ಪರಿಣಾಮ ನಿತ್ಯವೂ ಶಾಲೆಗೆ ಹೋಗಬೇಕಾಗಿರುವ ಮಕ್ಕಳಿಗೆ ಬಸ್ಸುಗಳಲ್ಲಿ ಪ್ರಯಾಣಕ್ಕೆ ಸ್ಥಳಾವಕಾಶ ಸಿಗುತ್ತಿಲ್ಲ. ಶಿಕ್ಷಕರು, ಕಾರ್ಮಿಕರಿಗೂ ಇದೇ ದುಸ್ಥಿತಿ. ಆಟೋ, ಲಗೇಜ್ ಆಟೋ, ಗೂಡ್ಸ್ ವಾಹನಗಳನ್ನು ಹತ್ತಿ ಅಪಾಯಕಾರಿ ರಸ್ತೆಗಳಲ್ಲಿ ಮಕ್ಕಳು ಶಾಲೆಗೆ ಹೋಗಬೇಕು, ಮನೆಗೆ ವಾಪಸ್ ಬರಬೇಕು ಎಂದು ಮಕ್ಕಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನು ಪರೀಕ್ಷೆ ಸಮಯದಲ್ಲಿ ಮಕ್ಕಳ ಸಂಕಷ್ಟ ಹೇಳತೀರದ್ದಾಗಿದೆ. ಟೈಮಿಗೆ ಸರಿಯಾಗಿ ಹೋಗಿ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ.. ಶಾಲಾ ಮಕ್ಕಳಿಗೆ ಪ್ರತ್ಯೇಕ ಬಸ್ ಬಿಡಿ ಅನ್ನೋ ಕೂಗು ಕೇಳುತ್ತಿದ್ದರು, ಕಾಂಗ್ರೆಸ್ ಸರ್ಕಾರಕ್ಕೆ ಅದ್ರಲ್ಲೂ ಸಾರಿಗೆ ಸಚಿವರಿಗೆ ಜಾಣ ಕಿವುಡು.. ರಾಜ್ಯದ ತುಮಕೂರು, ಚಿತ್ರದುರ್ಗ ಬೆಳಗಾವಿ, ಚಿಕ್ಕೋಡಿ, ಧಾರವಾಡ ಸೇರಿದಂತೆ ಬಹುತೇಕ ಜಿಲ್ಲೆಗಳ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳ ಗೋಳು ಹೇಳ ತೀರದ್ದಾಗಿದೆ. ಡಿಪೋದವರನ್ನ ಕೇಳಿದ್ರೆ ಬಸ್ ಶಾರ್ಟೆಜ್ ಅಂತಾರೆ, ಸ್ಥಳೀಯ ಶಾಸಕರನ್ನ ಕೇಳಿದ್ರೆ, ನೋಡೋಣ ಅಂತ ಭರವಸೆ ಕೊಡ್ತಿದ್ದಾರೆ. ಒಟ್ನಲ್ಲಿ ಶಕ್ತಿ ಯೋಜನೆ ಮಕಾಡೆ ಮಲಗಿರೋದಂತೂ ಸತ್ಯ.. ಪುಕ್ಸಟ್ಟೆ ಬಸ್ ಬಿಟ್ಟು ಬೆನ್ನು ತಟ್ಟಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ, ಅದರ ಎಫೆಕ್ಟ್ ಗೊತ್ತಾಗುತ್ತಿಲ್ಲ ಅನ್ನೋದೇ ದುರಂತ.