ಕ್ರೈಂ ಸ್ಟೋರಿಜಿಲ್ಲೆ

ಲೈಂಗಿಕ ದೌರ್ಜನ್ಯ ಕೇಸ್; ಆರೋಪಿ ಸಿರಾಜ್​ ಅರೆಸ್ಟ್​

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಇಡೀಯ ಮನುಕುಲವೇ ತಲೆ ತಗ್ಗಿಸುವಂಥ ಘಟನೆ ನಡೆದಿತ್ತು. 5 ವರ್ಷದ ಚಿಕ್ಕ ಮಗುವಿಗೆ ಜ್ಯೂಸ್ ಕೊಡಿಸುವುದಾವಗಿ ನಂಬಿಸಿ ಲೌಂಗಿಕ ದೌರ್ಜನ್ಯ ಮೆರೆದಿದ್ದ ಸಿರಾಜ್(55) ಈಗ ಪೋಲಿಸರ ಅತಿಥಿಯಾಗಿದ್ದಾನೆ.

ಕಳೆದು ಗುರುವಾರ ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಳೇ ಹುಬ್ಬಳ್ಳಿಯ ಮಾರುತಿನಗರದ ಸಿರಾಜ್ ಎಂಬ ವ್ಯಕ್ತಿ 5 ವರ್ಷದ ಶ್ರೀನಾಥ ಎಂಬ ಚಿಕ್ಕ ಮಗುವಿನ ಮೇಲೆ ಚೌಹಾನ್ ಲೇಜೌಟ್​ನಲ್ಲಿ ಲೈಂಗಿಕ ದೌರ್ಜನ್ನು ಎಸಗಿದ್ದ. ಆ ವೇಳೆ ಮಗು ವಿರೋಧ ವ್ಯಕ್ತಿಪಡಿಸಿದಾಗ ಮಗುವಿಗ ಕಿರುಕುಳ ಕೊಟ್ಟು ಹಲ್ಲೇ ನಡೆಸಿದ್ದ. ಈ ವಿಚಾರ ತಿಳಿದ ಜೈ ಭೀಮ್ ಯುವ ಸಂಘಟನೆಯು ಕುಟುಂಬಸ್ಥರ ಬೆನ್ನಿಗೆ ನಿಂತು, ಆರೋಪಿಗೆ ಶಿಕ್ಷೆಯಾಗುವಂತೆ ಪಟ್ಟು ಹಿಡಿದಿದ್ದರು. ಇದೀಗ ಆರೋಪಿ ಸಿರಾಜ್​ನನ್ನು ಹಳೇ ಹುಬ್ಬಳ್ಳಿ ಠಾಣೆ ಪೋಲಿಸರು ಬಂಧಿಸಿದ್ದಾರೆ. ಬಂಧನ ಅಷ್ಟೇ ಅಲ್ಲ ಆರೋಪಿ ಕಠಿಣ ಶಿಕ್ಷೆ ಕೊಡಿಸಿ ನ್ಯಾಯ ಒದಗಿಸುವಂತೆ ಮಗುವಿನ ತಾಯಿ ಕಣ್ಣಿರು ಹಾಕಿದ್ದಾರೆ.

Comments (0)

Your email address will not be published. Required fields are marked *

Back to top button