ಅಮೃತಧಾರೆ ಸೀರಿಯಲ್ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿ ಶೃತಿಗೆ ಆಕೆಯ ಪತಿಯೇ ಚೂರಿ ಇರಿದಿರುವ ಘಟನೆ ನಡೆದಿದೆ. ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್ನಲ್ಲಿ ಈ ಕೊಲೆ ಯತ್ನ ನಡೆದಿದೆ.
ಮಂಜುಳ @ಶ್ರುತಿ ಅಮೃತಧಾರೆ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಶೃತಿಯ ಶೀಲ ಶಂಕಿಸಿ ಆಕೆಯ ಪತಿ ಜುಲೈ 4 ರಂದು ಚೂರಿ ಇರಿದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶ್ರುತಿ ಚಿಕಿತ್ಸೆ ಪಡೆಯುತ್ತಿದ್ದಾರೆ.
20 ವರ್ಷದ ಹಿಂದೆ ಶೃತಿ, ಅಂಬರೀಶ್ ಎಂಬಾತನ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಹನುಮಂತ ನಗರದಲ್ಲಿ ಮನೆ ಲೀಸ್‌ಗೆ ಪಡೆದು ವಾಸವಾಗಿದ್ದರು. ಕೆಲ ತಿಂಗಳಿನಿಂದ ಶ್ರುತಿ ನಡವಳಿಕೆ ಬಗ್ಗೆ ಪತಿ ಅಂಬರೀಶ್ ಅನುಮಾನ ಪಡುತ್ತಿದ್ದರು. ಪ್ರತಿ ದಿನವೂ ಆಕೆಯ ಶೀಲ ಶಂಕಿಸಿ ಇಬ್ಬರ ನಡುವೆ ಗಲಾಟೆ ಆಗುತ್ತಿತ್ತು. ಈ ಬಗ್ಗೆ ಈ ಹಿಂದೆಯೇ ಶೃತಿ ತನ್ನ ಪತಿ ವಿರುದ್ಧ ದೂರು ಕೂಡ ನೀಡಿದ್ದು, ಏಪ್ರಿಲ್ನಿಂದ ತನ್ನ ಅಣ್ಣನ ಮನೆಯಲ್ಲಿ ವಾಸವಾಗಿದ್ರು.
ಆದರೆ ಜುಲೈ 3ರಂದು ಇಬ್ಬರ ಮಧ್ಯೆ ಮತ್ತೆ ರಾಜಿ ಸಂಧಾನ ನಡೆದು ಗಂಡನ ಮನೆಗೆ ಹೋಗಿದ್ದಳು. ಜುಲೈ 4ರಂದು ಮತ್ತೆ ಗಲಾಟೆ ಆಗಿದ್ದು, ಪತಿ ಅಂಬರೀಶ್, ಪತ್ನಿ ಶೃತಿಗೆ ಪೆಪ್ಪರ್ ಸ್ಪ್ರೇ ಮಾಡಿ ಕೊಲೆಗೆ ಯತ್ನಿಸಿದ್ದಾನೆ.. ಸದ್ಯ ಹನುಮಂತನಗರ ಪೊಲೀಸರು ಆರೋಪಿ ಅಂಬರೀಶನನ್ನು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.


