#Exclusive NewsTop Newsಫ್ರೀಡಂ ಟಿವಿ ವಿಶೇಷಸಿನಿಮಾಸುದ್ದಿ

ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಸುದೀರ್ಘ ವಾದ

ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡನೆ

57ನೇ ಸೆಷನ್ಸ್ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ಮಾಡಲಾಯಿತು. ನಟ ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ನಾಗೇಶ್ ಅವರು ಶತಾಯ-ಗತಾಯ ದರ್ಶನ್​ಗೆ ಬೇಲ್ ಕೊಡಿಸುವ ಪಣ ತೊಟ್ಟಂತೆ ವಾದ ಮಾಡಿದ್ರು.ನನ್ನ ಪ್ರಕಾರ ಇದು ತುಂಬಾ ಕೆಟ್ಟದಾದ ತನಿಖೆಯಾಗಿದೆ.ಈ ಪ್ರಕರಣದಲ್ಲಿ ಮೊದಲ ಟ್ರಯಲ್ ಮಾಧ್ಯಮಗಳಲ್ಲಿ ನಡೆದಿದೆ  ಎಂದ ಲಾಯರ್​, ತನಿಖೆಯ ಲೋಪದೋಷಗಳನ್ನು ಎತ್ತಿ ಹಿಡಿದಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ, ಸುಪ್ರೀಂಕೋರ್ಟ್ನ 2 ತೀರ್ಪುಗಳನ್ನ ಉಲ್ಲೇಖಿಸಿ ವಾದ ಮಂಡನೆ ಮಾಡಿದ ವಕೀಲ ಸಿ.ವಿ.ನಾಗೇಶ್.
ಸುಪ್ರೀಂ ತೀರ್ಪಿನ ಪ್ರತಿ ಕೇಳಿದ ಎಸ್​ಪಿಪಿ ಪ್ರಸನ್ನಕುಮಾರ್.ನಾನು ಕಷ್ಟಪಟ್ಟು ಸಂಗ್ರಹಿಸಿದ ಪ್ರತಿ ನಿಮಗೆ ಕೊಡಬೇಕೆಂದಿಲ್ಲ,ಆದರೂ ನಿಮಗೆ ತೀರ್ಪಿನ ಪ್ರತಿಗಳನ್ನ ನೀಡುತ್ತೇನೆ.ಪಂಚನಾಮೆ ಪ್ರತಿಯನ್ನು ಕೋರ್ಟ್ಗೆ ಹಾಜರುಪಡಿಸಿದ ನಾಗೇಶ್

d boss

 

ಮೃತನ ಮುಖವನ್ನು ನಾಯಿ ತಿಂದಿದೆ ಎಂದು ವರದಿಯಲ್ಲಿದೆ,
ಆದರೆ ಗಾಯವನ್ನು ಹಲ್ಲೆ ಎಂದು ತೋರಿಸಲಾಗುತ್ತಿದೆ.ಮರದ ಕೊಂಬೆ, ಹಗ್ಗ, ನೀರಿನ ಬಾಟಲ್ ವಶಕ್ಕೆ ಪಡೆಯಲಾಗಿದೆ.ನೀರಿನ ಬಾಟಲ್ ಕೂಡ ಸಾಕ್ಷ್ಯ ಅಂತ ತೋರಿಸಿದ್ದಾರೆ.ಜೂನ್ 9ರಂದೇ ಈ ಎಲ್ಲವನ್ನೂ ಪೊಲೀಸ್ ವಶದಲ್ಲಿತ್ತು.ಜೂ.12ರಂದು ಕತ್ತಲೆಯಲ್ಲಿ ಪಂಚನಾಮೆ ಮಾಡಿ ರಿಕವರಿ ಮಾಡಿದ್ದಾರೆ.ಪೊಲೀಸರಿಗೆ ಬೆಳಿಗ್ಗೆ ಸಿಗದಿದ್ದ ಈ ವಸ್ತುಗಳು ರಾತ್ರಿ ಸಿಕ್ಕಿದ್ದೇಗೆ?
ಈ ಕೇಸಲ್ಲಿ ರಿಕವರಿ ಎಲ್ಲಾ ಸುಳ್ಳು ಎಂದು ವಕೀಲ ನಾಗೇಶ್ ವಾದ.ಪ್ರಕರಣದ ಸಾಕ್ಷ್ಯಗಳನ್ನು ತನಿಖಾಧಿಕಾರಿ ಸೃಷ್ಟಿ ಮಾಡಿದ್ದಾರೆ.ನಟ ದರ್ಶನ್ ಅವರಿಗೆ ಜಾಮೀನು ನೀಡಬೇಕೆಂದು ನಾಗೇಶ್ ಮನವಿ.

ಕೊಲೆಗೀಡಾದ ರೇಣುಕಾಸ್ವಾಮಿ ಚಿತ್ರದುರ್ಗ ನಿವಾಸದಲ್ಲಿ ಸ್ಮಶಾನ ಮೌನ - Janathavani - Davanagere News Paper

ಜೂ.10ರಂದು ಶರಣಾದ ಆರೋಪಿಗಳ ಸ್ವಇಚ್ಛಾ ಹೇಳಿಕೆ ದಾಖಲಾಗಿದೆ.ಜೂ.11ರಂದು ಆರೋಪಿಗಳನ್ನ ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.ಜೂ.12ಕ್ಕೆ ಆರೋಪಿಗಳ ಹೇಳಿಕೆಗಳ ದಾಖಲಿಸಿಕೊಂಡಿದ್ದೇವೆ ಅಂದ್ರು,ತನಿಖೆ ನಡೆಸದೆಯೇ ಒಂದೇ ದಿನದಲ್ಲಿ ಹೇಳಿಕೆ ದಾಖಲಿಸಿದ್ದೇಗೆ..? ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಪ್ರಬಲ ವಾದ ಪಿಎಸ್ಐ ವಿನಯ್ ಹೇಳಿಕೆಯಲ್ಲಿ ಜೂನ್ 8 ಅಂತ ಮಾಹಿತಿ ಇದೆ.ಕೊಲೆ ಮಾಡಿರೋದು ದರ್ಶನ್ ಅಭಿಮಾನಿ ಅಂತಾನೂ ಇದೆ.ಹಣಕಾಸಿನ ವಿಚಾರಕ್ಕೆ ಗಲಾಟೆ ಅಂತ PSI ಜೊತೆ ಚರ್ಚೆ.ಇಡೀ ಪ್ರಕರಣ ಕಪೋಲಕಲ್ಪಿತ ಸ್ಟೋರಿ ಎಂದ ಸಿ.ವಿ.ನಾಗೇಶ್.

d boss (@dboss69368812) / X

 

ಪಟ್ಟಣಗೆರೆ ಶೆಡ್ ಸೆಕ್ಯೂರಿಟಿ ಗಾರ್ಡ್ ಹೇಳಿಕೆ ಉಲ್ಲೇಖಿಸಿ ವಾದ
CRPC 164 ಅಡಿಯಲ್ಲಿ ಸೆಕ್ಯೂರಿಟಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.ಸೆಕ್ಯೂರಿಟಿ ಗಾರ್ಡ್ ಉತ್ತರ ಭಾರತದವ ಎಂದು ವಾದ.ಪಟ್ಟಣಗೆರೆ ಶೆಡ್ ಸೆಕ್ಯೂರಿಟಿ ಗೆ ಕನ್ನಡ ಸರಿಯಾಗಿ ಬರೋದಿಲ್ಲ
ಸೆಕ್ಯೂರಿಟಿ ಹೇಳಿಕೆಯನ್ನು ಹಿಂದಿಯಲ್ಲಿ ತರ್ಜುಮೆ ಮಾಡಿದ್ದಾರೆ. ಜೂ.9ರಂದು ಪೊಲೀಸರು ಬಂದಿದ್ರು ಅಂತ ಸೆಕ್ಯೂರಿಟಿ ಹೇಳಿದ್ದಾರೆ.ಜೂನ್ 9ರಂದೇ ಪೊಲೀಸರು ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ.ಜೂ.12ಕ್ಕೆ ರಕ್ತದ ಕಲೆ ಇದ್ದ ವಸ್ತುಗಳ ರಿಕವರಿ ಅಂತಿದೆ,ಹಾಗಾದ್ರೆ ಜೂ.8ರಿಂದ 12ರವರೆಗೆ ಯಾಕೆ ಸೀಜ್ ಮಾಡಿಲ್ಲ..? ಇದು ಕ್ಲಾಸಿಕ್ ತನಿಖೆಯಲ್ಲ.. ಕ್ಲಾಸಿಕ್ ವೈಫಲ್ಯ ಎಂದು ವಾದ ,ಪೊಲೀಸರೇ ಸಾಕ್ಷ್ಯಗಳನ್ನ ಸೃಷ್ಟಿ ಮಾಡಿದ್ದಾರೆ ಎಂದು ಅನ್ನಿಸ್ತಿದೆ.

ಅವಕಾಶಕ್ಕಾಗಿ ಅಡ್ಡಾಡುತ್ತಿದ್ದ ದರ್ಶನ್ ಇಂದು ಕೋಟಿ.. ಕೋಟಿ ಆಸ್ತಿ ಒಡೆಯ; ಡಿ ಬಾಸ್​ ಬಳಿಯಿರುವ ಆಸ್ತಿ ಮೌಲ್ಯ ಹೇಳಿದ್ರೆ ಶಾಕ್​ ಆಗೋದು ಪಕ್ಕಾ..

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಪಾತ್ರವಿಲ್ಲ!
ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿದ್ದಾಗಿ ಆರೋಪಿಗಳು ಹೇಳಿದ್ದಾರೆ.ಎ4 ಪ್ರದೋಷ್ ಪಿಎಸ್ಐಗೆ ಕರೆ ಮಾಡಿ ಮಾತನಾಡಿದ್ದಾರೆ,ಜೂನ್ 9ರಂದು ಪೊಲೀಸರಿಗೆ ಹತ್ಯೆ ವಿಷಯ ಗೊತ್ತಾಗಿದೆ. ಜೂ.11ರಂದು ಪೊಲೀಸರು ವಸ್ತುಗಳನ್ನ ರಿಕವರಿ ಮಾಡಿದ್ದಾರೆ.ಜೂನ್ 12ರ ರಾತ್ರಿಯವರೆಗೆ ಪೊಲೀಸರು ಏನ್ ಮಾಡ್ತಿದ್ರು..? ಟಾರ್ಚ್ ಹಿಡಿದುಕೊಂಡು ಹೋಗಿ ರಿಕವರಿ ಮಾಡಿದ್ದಾರೆ
ಮೂರು ದಿನಗಳ ಕಾಲ ನಿಮಗೆ ಇದ್ದ ಕೆಲಸವೇನು..? ತನಿಖಾಧಿಕಾರಿ ತಮಗೆ ಬೇಕಾದಂತೆ ತನಿಖೆ ಮಾಡಿದ್ದಾರೆ ,ಚಾರ್ಜ್ಶೀಟ್ನಲ್ಲಿನ ಲೋಪದೋಷಗಳನ್ನ ಉಲ್ಲೇಖಿಸಿ ವಾದ.

ದರ್ಶನ್ 'ತಾರಕ್' ಮೊದಲ 3 ದಿನದಲ್ಲಿ ಗಳಿಸಿದ್ದೆಷ್ಟು? | Darshan's Tarak first 3 Days Collection - Kannada Filmibeat

 

 

 

 

 

Comments (0)

Your email address will not be published. Required fields are marked *

Back to top button