ನೊಯ್ಡಾ: ಪಬ್‌ಜೀ ಗೇಮ್‌ನಲ್ಲಿ ಪರಿಚಯವಾದ ಸ್ನೇಹಿತನನ್ನು ವರಿಸಲು ಪತಿಯನ್ನು ತೊರೆದು ಕಳೆದ ವರ್ಷ ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದು, ಗ್ರೇಟರ್ ನೋಯ್ಡಾದಲ್ಲಿ ತನ್ನ ಪ್ರಿಯಕರ4 ಮಕ್ಕಳೊಂದಿಗೆ ಪಾಕ್‌ನಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸೀಮಾ ಗರ್ಭಿಣಿನೊಂದಿಗೆ ನೆಲೆಸಿರುವ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್ ಇದೀಗ ಗರ್ಭಿಣಿಯಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆ್ಯಕ್ಟಿವ್ ಆಗಿರುವ ಸೀಮಾ ಹೈದರ್ ಮತ್ತು ಸಚಿನ್ ಮೀನಾ ಜೋಡಿ ಆಗಾಗ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬAಧಿಸಿದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಗರ್ಭಿಣಿಯಾಗಿರುವ ಖುಷಿಯ ವಿಚಾರವನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ. ಈ ವಿಡಿಯೋದಲ್ಲಿ ಸೀಮಾ ಗರ್ಭಧಾರಣೆಯ ಪರೀಕ್ಷಾ ಕಿಟ್‌ನೊಂದಿಗೆ ಕಾಣಿಸಿಕೊಂಡಿದ್ದು, ಗರ್ಭಿಣಿಯಾಗಿರುವ ಬಗ್ಗೆ ಪತಿ ಸಚಿನ್‌ಗೆ ತಿಳಿಸಿದ್ದಾರೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಕೋಬಾಬಾದ್ ಮೂಲದ ಸೀಮಾ ಹೈದರ್ ಸಂದರ್ಶನವೊಂದರಲ್ಲಿ ‘ತಾನು ಹಿಂದು ಧರ್ಮವನ್ನು ಸ್ವೀಕರಿಸಿದ್ದೇನೆ. ತಾಯ್ನಾಡಿಗೆ (ಪಾಕಿಸ್ತಾನ) ಮರಳಲು ಇಷ್ಟವಿಲ್ಲ. ತನ್ನ ನಾಲ್ಕು ಮಕ್ಕಳು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ’ ಎಂದು ಹೇಳಿದ್ದರು. ಭಾರತೀಯ ಪೌರತ್ವವನ್ನು ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಈ ಹಿಂದೆ ಪತ್ರ ಬರೆದಿದ್ದರು.
ಭಾರತೀಯ ಪ್ರಜೆ ಸಚಿನ್ ಮೀನಾ ಹಾಗೂ ಸೀಮಾ ಹೈದರ್ 2019ರಲ್ಲಿ ಪಬ್‌ಜಿ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್ ಮೂಲಕ ಪರಿಚಯವಾಗಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಬೆಳೆದಿದೆ. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಹೀಗಾಗಿ ಸೀಮಾ ಹೈದರ್ ಗಂಡ ಗುಲಾಮ್ ಹೈದರ್‌ನನ್ನು ತೊರೆದು ತನ್ನ ನಾಲ್ಕು ಮಕ್ಕಳೊಂದಿಗೆ ಮೇ 2023ರಲ್ಲಿ ಪಾಕಿಸ್ತಾನದ ತಮ್ಮ ಕರಾಚಿ ನಿವಾಸದಿಂದ ನೇಪಾಳಕ್ಕೆ ತೆರಳಿ, ಅಲ್ಲಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದರು.


