ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಸೀಕಲ್ ರಾಮಚಂದ್ರೇಗೌಡರು ನೇಮಕರಾಗಿದ್ದಾರೆ.. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮುಖಂಡರಾಗಿರೋ ಸೀಕಲ್ ರಾಮಚಂದ್ರಗೌಡರಿಗೆ ಬಿಜೆಪಿ ಅತಿ ದೊಡ್ಡ ಜವಾಬ್ದಾರಿಯನ್ನ ವಹಿಸಿದೆ. ಚಿಕ್ಕಬಳ್ಳಾಪುರದ ಹಾಲಿ ಸಂಸದರಾದ ಡಾ.ಕೆ.ಸುಧಾಕರ್ ಅವರ ಜೊತೆಗೂಡಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಬಲವರ್ದನೆಗೆ ಸೀಕಲ್ ರಾಮಚಂದ್ರಗೌಡರು ಮುಂದಾಗಿದ್ದಾರೆ. ಈ ಹಿಂದೆ ಸಂದೀಪ್ ರೆಡ್ಡಿ ಅವರನ್ನ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು. ಇದಕ್ಕೆ ಪಕ್ಷದ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ರು. ಇದೀಗ ಸೀಕಲ್ ರಾಮಚಂದ್ರೇಗೌಡರನ್ನ ಜಿಲ್ಲಾಧ್ಯಕ್ಷರನ್ನಾಗಿ ಹೈಕಮಾಂಡ್ ನೇಮಿಸಿದೆ. ಇದ್ರಿಂದ ಬಿಜೆಪಿ ಕಾರ್ಯಕರ್ತರು ಕೂಡ ಖುಷಿಯಿಂದ ಈ ನಿರ್ಧಾರವನ್ನ ಸ್ವಾಗತಿಸಿದ್ದಾರೆ. ಇನ್ನು ಸೀಕಲ್ ರಾಮಚಂದ್ರೇಗೌಡರು ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಜಿಲ್ಲಾದ್ಯಂತ ಪಕ್ಷ ಬಲವರ್ದನೆಗೆ ಮುಂದಾಗಿದ್ದಾರೆ. ಜಿಲ್ಲೆಯ ಕಣಜೇಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಭೇಟಿ ಕೊಟ್ಟು ಜನ ಮನ ಗೆಲ್ಲುತ್ತಿದ್ದಾರೆ..