Thursday, November 20, 2025
22.5 C
Bengaluru
Google search engine
LIVE
ಮನೆರಾಜಕೀಯಚಾಮುಂಡಿ ಬೆಟ್ಟದ ಮಹಿಷ ವೃತ್ತದಲ್ಲಿ ಸೆಕ್ಷನ್​ 144 ಜಾರಿ

ಚಾಮುಂಡಿ ಬೆಟ್ಟದ ಮಹಿಷ ವೃತ್ತದಲ್ಲಿ ಸೆಕ್ಷನ್​ 144 ಜಾರಿ

ಮೈಸೂರಿನ ಚಾಮುಂಡಿ ಬೆಟ್ಟದ ಮಹಿಷ ವೃತ್ತಕ್ಕೆ ಸೆಕ್ಷನ್​ 144 ಜಾರಿ ಮಾಡಲಾಗಿದೆ. ಇಂದು ಮಹಿಷ ದಸರಾ  ಆಚರಣೆ ನಡೆಯಲಿದೆ. ಮಹಿಷ ವಿಗ್ರಹದ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಈ ಆದೇಶವು ಸೆಪ್ಟೆಂಬರ್ 23, 2025 ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 25, 2025 ರ ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಇದು ಮಹಿಷ ಆಚರಣೆ ಸಮಿತಿಯು ಮಹಿಷ ವಿಗ್ರಹಕ್ಕೆ ಪುಷ್ಪಾರ್ಚನೆ ನಡೆಸಲು ಅನುಮತಿ ಕೋರಿದ್ದ ಹಿನ್ನೆಲೆಯಲ್ಲಿ ಜಾರಿಗೆ ಬಂದಿದೆ.

ಈ ನಿಷೇಧಾಜ್ಞೆಯು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಯಾವುದೇ ತೊಂದರೆಯನ್ನು ಉಂಟುಮಾಡುವುದಿಲ್ಲ ಎಂದು ಸ್ಥಳೀಯ ಆಡಳಿತವು ಸ್ಪಷ್ಟಪಡಿಸಿದೆ. ದೇವಾಲಯಕ್ಕೆ ಭಕ್ತರು ಎಂದಿನಂತೆ ದರ್ಶನಕ್ಕೆ ಹೋಗಬಹುದು. ಚಾಮುಂಡೇಶ್ವರಿ ತಾಯಿಯ ದರ್ಶನಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ, ಮಹಿಷ ವಿಗ್ರಹದ ಸುತ್ತಮುತ್ತ ಯಾವುದೇ ಗುಂಪುಗೂಡುವಿಕೆಗೆ ಅವಕಾಶವಿಲ್ಲ. ಪೊಲೀಸ್ ಇಲಾಖೆಯು ಈ ಪ್ರದೇಶದಲ್ಲಿ ಕಟ್ಟೆಚ್ಚರಿಕೆಯಿಂದ ಕಾವಲು ಇಡಲಿದ್ದು, ಆದೇಶ ಉಲ್ಲಂಘನೆಯಾದರೆ ಕಾನೂನು ಕ್ರಮ ಜರುಗಿಸಲಾಗುವುದು.

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಸಂಭ್ರಮ ಹಿಮ್ಮಡಿಯಾಗಿದೆ. ನಿತ್ಯ ಹತ್ತು ಹಲವು ವಿಶೇಷ ಕಾರ್ಯಕ್ರಮಗಳು ದಸರಾ ರಂಗನ್ನ ಹೆಚ್ಚಿಸುತ್ತಿವೆ. ಈ ಪೈಕಿ ವಿಂಟೇಜ್ ಕಾರುಗಳು ಪ್ರದರ್ಶನವು ಒಂದು. ಪ್ರತಿವರ್ಷದಂತೆ ಈ ವರ್ಷವು ವಿಂಟೇಜ್ ಕಾರುಗಳು ದಸರಾ ರಂಗನ್ನ ಹೆಚ್ಚಿಸಿದ್ದು, ಜನರನ್ನ ಆಕರ್ಷಿಸುತ್ತಿದೆ. ಮೈಸೂರಿನ ಹೆಬ್ಬಾಳ ಕೈಗಾರಿಕ ಪ್ರದೇಶದಲ್ಲಿ ಆಯೋಜಿಸಿರುವ ಈ ಕಾರುಗಳ ಪ್ರದರ್ಶನದಲ್ಲಿ 1905ರ ಕಾರ್ ಮಾಡೆಲ್ ನಿಂದ 2025ರ ಮಾಡೆಲ್ ವರೆಗೂ ಕಾರುಗಳ ಕಾಣಸಿಗುತ್ತಿವೆ. ಇದರಲ್ಲಿ ಹಲವು ಕಾರುಗಳು ವಿದೇಶದಲ್ಲಿ ಮಾತ್ರ ಬಳಕೆಯಲ್ಲಿದ್ದಂತವು. ಇನ್ನೂ ಕೆಲವು ಭಾರತದ ರಸ್ತೆಗಳಲ್ಲಿ ಘರ್ಜಿಸಿ ಮರೆಯಾದವು. ಇನ್ನೂ ಕೆಲವು ರಾಜ ಮಹರಾಜರು ಬಳಸಿದ್ದ ಐಷಾರಾಮಿ ಕಾರುಗಳು.

ಪ್ರಮುಖವಾಗಿ ಯುಕೆ, ಯುಎಸ್, ಇಟಲಿ ಸೇರಿದಂತೆ ಹಲವು ದೇಶಗಳ ಕಾರುಗಳು. ಫೋರ್ಡ್ ಜಿಪಿಡಬ್ಲ್ಯೂ, ರೋಲ್ಸ್ ರಾಯ್, ಲ್ಯಾಂಡ್ ರೋವರ್, ಅಂಬಾಸಿಡರ್, ಬೆಡ್ ಫೋರ್ಡ್ ನಂತಹ ಹಲವು ಮರೆಯಾದ ಕಾರುಗಳು ಪ್ರದರ್ಶನದಲ್ಲಿ ಕಾಣಸಿಗುತ್ತಿವೆ. ಕಾರುಗಳ ಸಂಗ್ರಹ ಬಗ್ಗೆ ಮಾಲೀಕರಾದ ಸಾವಿತ್ರಿ ಗೋಪಿನಾಥ ಶೆಣೈ ಮಾತನಾಡಿ, ಇದು ನನ್ನ ಪತಿ ಹವ್ಯಾಸ. ಹಲವು ವರ್ಷಗಳಿಂದ ನಾನಾ ದೇಶಗಳಿಂದ ಈ ಕಾರುಗಳನ್ನ ತಂದು ಸಂಗ್ರಹಿಸಲಾಗಿದೆ.

ಯುವ ದಸರಾ 2025ಕ್ಕೆ ಚಾಲನೆ ಸಿಕ್ಕಿದ್ದು 5 ದಿನಗಳ ಕಾಲ ಯುವ ದಸರಾ ಸಂಭ್ರಮಾಚರಣೆ ಇರಲಿದೆ. ನಿನ್ನೆ ಮೈಸೂರು ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಯುವ ದಸರಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದು, ನಿನ್ನೆ ಅರ್ಜುನ್ ಜನ್ಯ ಮ್ಯೂಸಿಕ್ ಕಲರವ ಜೋರಾಗಿತ್ತು. ಬೆಂಗಳೂರು ಮೂಲದ ಲಗೋರಿ ಬ್ಯಾಂಡ್‌ಗೆ ಯುವಕರು ಕುಣಿದು ಕುಪ್ಪಳಿಸಿದ್ರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments