ಮತ್ತೊಮ್ಮೆ ದಲಿತ ಸಚಿವರು ರಹಸ್ಯ ಸಭೆ ಮಾಡಿ ಚರ್ಚೆ ನಡೆಸಿದ್ದಾರೆ. ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಗೃಹ ಸಚಿವ ಪರಮೇಶ್ವರ್, ಸಚಿವ ಹೆಚ್.ಸಿ ಮಹಾದೇವಪ್ಪ ಹಾಗೂ ಸಚಿವ ಕೆ.ಎನ್ ರಾಜಣ್ಣ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ದಾರೆ.
ದಲಿತ ಸಚಿವರು ಸುಮಾರು 3 ಗಂಟೆಗಳ ಕಾಲ ರಹಸ್ಯ ಸಮಾಲೋಚನೆ ನಡೆಸಿದ್ದಾರೆ. ಸಚಿವರ ಈ ಗೌಪ್ಯ ಸಭೆ ಭಾರೀ ಕುತೂಹಲ ಮೂಡಿಸಿದೆ. ಮೀಟಿಂಗ್ ಮುಗಿಸಿ ಹೊರ ಬಂದ ನಾಯಕರು ಊಟಕ್ಕೆ ಕರೆದಿದ್ರು ಊಟ ಬಂದಿದ್ದೇವೆ ಅಂತಷ್ಟೇ ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪರಮೇಶ್ವರ್ ನಿವಾಸದಲ್ಲಿ ರಹಸ್ಯ ಸಭೆ ನಡೆಸಿದ್ದರು. ಸಿದ್ದರಾಮಯ್ಯರ ಮುಂದೆಯೂ ಸಮಾಲೋಚನೆ ನಡೆಸಿದ್ದರು. ಇದೀಗ ಸಿಎಂ, ಡಿಸಿಎಂ ದೆಹಲಿಗೆ ತೆರಳಿರುವ ಬೆನ್ನಲ್ಲೆ ಸಭೆ ನಡೆಸಿದ್ದಾರೆ. ನಿನ್ನೆ ರಾತ್ರಿಯಷ್ಟೇ ಏರ್ಪೋರ್ಟ್ನಲ್ಲಿ ಸಿಎಂ ಜೊತೆ ಮಾತುಕತೆ ನಡೆಸಿ ಸತೀಶ್ ಜಾರಕಿಹೊಳಿ ವಾಪಸ್ ಆಗಿದ್ದರು.
ಇನ್ನು ಸಭೆ ಬಗ್ಗೆ ಡಾ.ಹೆಚ್ ಸಿ ಮಹದೇವಪ್ಪ ಮಾತನಾಡಿ.. ಊಟಕ್ಕೆ ಕರೆದಿದ್ದರು ಬಂದಿದ್ದೇವೆ. ಒಳ್ಳೆ ಊಟ ಕೊಟ್ಟರು ಮಾಡಿದ್ದೇವೆ. ನಾಲ್ಕೈದು ದಿನದ ಹಿಂದೆ ಊಟಕ್ಕೆ ಆಹ್ವಾನ ಮಾಡಿದ್ದರು ಹಾಗಾಗಿ ಬಂದೆ. ಉಳಿದವರು ಯಾವ ಕಾರಣಕ್ಕೆ ಬಂದಿದ್ದರೋ ಗೊತ್ತಿಲ್ಲ. ನಾನಂತು ಊಟಕ್ಕೆ ಆಹ್ವಾನ ಮಾಡಿದ್ದರು ಬಂದೆ. ಕ್ಷೇತ್ರದ ಕೆಲ ಕೆಲಸದ ಬಗ್ಗೆ ಮಾತನಾಡಿದ್ದೇನೆ ಅಷ್ಟೇ. ಬೇರೆ ವಿಚಾರ ಗೊತ್ತಿಲ್ಲ ಎಂದರು.