ನೋಯ್ಡಾದ ಶಾಲೆಯೊಂದರ ಶಿಕ್ಷಕಿಯರ ಶೌಚಾಲಯದಲ್ಲಿ ಸ್ಪೈ ಕ್ಯಾಮೆರಾ ಇಟ್ಟಿದ್ದ ಶಾಲೆಯ ನಿರ್ದೇಶಕನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಶಿಕ್ಷಕಿಯರ ವಾಶ್​ ರೂಮನ್​ ಬಲ್ಬ್​ ಸಾಕೆಟ್​ನಲ್ಲಿ ಸ್ಪೈ ಕ್ಯಾಮೆರಾವನ್ನು ಇಟ್ಟಿದ್ದ ಎನ್ನಲಾಗಿದೆ. ಆತ ತನ್ನ ಕಂಪ್ಯೂಟರ್​ ಹಾಗೂ ಮೊಬೈಲ್ ಮೂಲಕ ವಾಶ್​ರೂಮನ ವಿಡಿಯೋವನ್ನು ಲೈವ್ ಆಗಿ ವೀಕ್ಷಿಸುತ್ತಿದ್ದ. ಈ ಕುರಿತು ಶಿಕ್ಷಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಘಟನೆಯು ನೋಯ್ಡಾದ ಸೆಕ್ಟರ್ 70 ರ ಪ್ಲೇ ಸ್ಕೂಲ್ ಆದ ಲರ್ನ್ ವಿತ್ ಫನ್‌ನಲ್ಲಿ ನಡೆದಿದೆ. ಡಿಸೆಂಬರ್ 10 ರಂದು ಶಿಕ್ಷಕಿಯೊಬ್ಬರು ವಾಶ್‌ರೂಮ್‌ನ ಬಲ್ಬ್ ಹೋಲ್ಡರ್‌ನಲ್ಲಿ ಅಸಹಜವಾದದ್ದನ್ನು ಗಮನಿಸಿದರು. ಹೋಲ್ಡರ್​ನಲ್ಲಿ ಮಸುಕಾದ ಬೆಳಕಿರುವುದನ್ನು ಗಮನಿಸಿದರು. ಅದು ಅನುಮಾನವನ್ನು ಹುಟ್ಟುಹಾಕಿತ್ತು. ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಸ್ಪೈ ಕ್ಯಾಮೆರಾ ಇರುವುದು ಕಂಡುಬಂದಿತ್ತು. ಕೂಡಲೇ ಶಾಲೆಯ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಶಿಕ್ಷಕಿಯು ಶಾಲೆಯ ನಿರ್ದೇಶಕ ನವನಿಷ್ ಸಹಾಯ್ ಮತ್ತು ಶಾಲೆಯ ಸಂಯೋಜಕರಾದ ಪಾರುಲ್ ಅವರಿಗೆ ವಿಷಯ ತಿಳಿಸಿದ್ದಾರೆ. ಅವರು ಆರೋಪಗಳನ್ನು ನಿರಾಕರಿಸಿದರು. ಸಹಾಯ್ ಅಥವಾ ಪಾರುಲ್ ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕಿ ಆರೋಪಿಸಿದ್ದಾರೆ.

ಶಿಕ್ಷಕಿಯ ದೂರಿನ ಮೇರೆಗೆ ನೋಯ್ಡಾದ ಕೇಂದ್ರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಶಕ್ತಿ ಮೋಹನ್ ಅವಸ್ತಿ ಅವರು ತನಿಖೆ ಆರಂಭಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೆಕಾರ್ಡ್​ ಮಾಡದೆಯೇ ಲೈವ್​ ಸ್ಟ್ರೀಮಿಂಗ್ ಮಾಡುವ ಸಾಮರ್ಥ್ಯವನ್ನು ಅದು ಹೊಂದಿದೆ. ನಂತರ ಡೈರೆಕ್ಟರ್ ನವೀಶ್ ಸಹಾಯ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಸಹಾಯ್ ವಿಚಾರಣೆಯ ಸಮಯದಲ್ಲಿ ತಾನು ಆನ್‌ಲೈನ್‌ನಲ್ಲಿ ₹ 22,000 ಕ್ಕೆ ಸ್ಪೈ ಕ್ಯಾಮೆರಾವನ್ನು ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆ . ಸಾಧನವನ್ನು ನಿರ್ದಿಷ್ಟವಾಗಿ ಬಲ್ಬ್ ಹೋಲ್ಡರ್‌ನೊಳಗೆ ಮರೆಮಾಡಲು ವಿನ್ಯಾಸಗೊಳಿಸಲಾಗಿದೆ. ಇದು ಸಾಮಾನ್ಯವಾಗಿ ಯಾರ ಕಣ್ಣಿಗೂ ಕಾಣಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ಈ ಹಿಂದೆ ಶಾಲೆಯ ಶೌಚಾಲಯದಲ್ಲಿ ಇದೇ ರೀತಿಯ ಪತ್ತೇದಾರಿ ಕ್ಯಾಮೆರಾ ಸಿಕ್ಕಿತ್ತು ಇದು ಮೊದಲಲ್ಲ ಎಂದು ಶಿಕ್ಷಕಿ ಹೇಳಿದ್ದಾರೆ. ಅದನ್ನು ಪಾರುಲ್​ಗೆ ಹಸ್ತಾಂತರಿಸಲಾಗಿತ್ತು ಆದರೆ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

Verified by MonsterInsights