ತುಮಕೂರು : ಖಾಸಗಿ ವ್ಯಕ್ತಿಗಳ ಉಪಟಳಕ್ಕೆ ಶಾಲಾ ಮಕ್ಕಳಿಗೆ ನೀರಿನ ಅಭಾವದಿಂದ ಮಕ್ಕಳ ಪರದಾಟ. ಈ ಹಿಂದೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕೊರೆಸಿದ ಬೋರ್ವೆಲ್ ನನ್ನ ಜಮೀನಿನಲ್ಲಿ ಇದೆ ಎಂದು ಕೋರ್ಟ್ ಮೆಟ್ಟಿಲೇರಿದ ನಾಗರಾಜು ಮನ ಒಲಿಸಲು ಮುಂದಾದ ತಹಶೀಲ್ದಾರ್ ಮಂಜುನಾಥ್ ಕೆ ಹಾಗೂ ಸಿಪಿಐ ಅನಿಲ್. 2012 ರಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮುರಾರ್ಜಿ ದೇಸಾಯಿ ಶಾಲೆಯ ವಿದ್ಯರ್ಥಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಕೊಳವೆಬಾವಿ ಹಾಕಲಾಗಿತ್ತು.ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ರೆಡ್ಡಿಕಟ್ಟೆಯಲ್ಲಿ ಇರುವ ವಸತಿ ಶಾಲೆ.
ತಾಲ್ಲೂಕಿನ ಶಾಂತಲಿಂಗಯ್ಯಪಾಳ್ಯ ಗ್ರಾಮದ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಇರುವ ಬೋರ್ ವೆಲ್ ನಮಗೆ ಸೇರಿದೆ ಎಂದು ನೀರು ಬಿಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮಂಜುನಾಥ್ ಕೆ ಹಾಗೂ ಸಿ ಪಿ ಐ ಅನೀಲ್ ಭೇಟಿ ನೀಡಿದ್ದಾರೆ.ಆದರೆ ನಾಗರಾಜು ನಾನು ಈ ವಿಚಾರದಲ್ಲಿ ಕೋರ್ಟ್ ಗೆ ಮನವಿ ಮಾಡಿದ್ದಾರೆ ಹಾಗಾಗಿ ಇವರ ಮೇಲೆ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿದ್ದಾರೆ ಅಧಿಕಾರಿಗಳು.ವಸತಿ ಶಾಲೆಗಾಗಿ ಕುಡಿಯುವ ನೀರು ಒದಗಿಸುವ ಸಲುವಾಗಿ ಕೊರೆಸಿದ ಕೊಳವೆಬಾವಿ.ಕೊಳವೆಬಾವಿ ಕೊರೆಯುವ ಸಮಯದಲ್ಲಿ ದಾರಿಪಕ್ಕ ಇತ್ತು.ಆದರೆ ಪಕ್ಕದ ಜಮೀನು ಮಾಲಿಕ ನಾಗರಾಜು ಒತ್ತುವರಿ ಮಾಡಿಕೊಂಡು ನನಗೆ ಬರಬೇಕು ಎಂದು ಗಲಾಟೆ ಮಾಡುತ್ತಿದ್ದಾನೆ ಎಂದು ಗ್ರಾಮಸ್ಥರು ಹೇಳುತ್ತಾರೆ.ಆದರೆ ವಿಪರ್ಯಾಸ ಎಂದರೆ ಈ ಜಮೀನು ನಾಗರಾಜು ಹೆಸರಿನಲ್ಲಿ ಇಲ್ಲ .
ಈ ಜಮೀನು ನನಗೆ ಬರಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.ಆದರೆ ಎಲ್ಲಾದರ ನಡುವೆ ವಸತಿ ಶಾಲೆ ಮಕ್ಕಳಿಗೆ ದಿನನಿತ್ಯದ ಕಾರ್ಯಕ್ರಮಗಳಿಗೆ ನೀರು ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಹಿಂದೆಯೂ ಸಹ ಇದೆ ವಿಚಾರವಾಗಿ ಪೋಲಿಸ್ ಠಾಣೆ ಮೆಟ್ಟಿಲೇರಿದ ಈ ಪ್ರಕರಣದಲ್ಲಿ ನಾಗರಾಜು ನಾನು ಕುಡಿಯುವ ನೀರಿನ ವಿಚಾರದಲ್ಲಿ ನಾನು ತೊಂದರೆ ನೀಡುವುದಿಲ್ಲ ಎಂದು ಒಪ್ಪಿಕೊಂಡು ಸಹಿ ಹಾಕಿದ್ದಾರೆ ಆದರೆ ಮತ್ತೆ ಅದೇ ಕ್ಯಾತೆ ತೆಗೆದಿದ್ದು ಈಗ ಗ್ರಾಮಸ್ಥರಿಗೂ ಶಾಲಾ ಮಕ್ಕಳಿಗೆ ನೀರಿನ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.