ಕಾಡು ಪ್ರಾಣಿಗಳ ಉಪಟಳಕ್ಕೆ ಬೆಚ್ಚಿಬಿದ್ದ ಸರಗೂರು ತಾಲೂಕಿನ ಜನರು, ಕಾಡು ಪ್ರಾಣಿಗಳ ದಾಳಿಗೆ ಸಾಕು ಪ್ರಾಣಿಗಳು, ಕೋಳಿಗಳ ಮಾರಣ ಹೋಮವಾಗುತ್ತಿದೆ.. ಕಳೆದ ಒಂದು ತಿಂಗಳಿನಿಂದ ಮೂರು ಹುಲಿ ಹಾಗೂ 2 ಚಿರತೆಗಳು ಪದೇ ಪದೇ ಪ್ರತ್ಯೇಕ್ಷವಾಗ್ತಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ಕೊಲ್ಲುತ್ತಿರುವ ಘಟನೆ ದಿನ ನಿತ್ಯ ಒಂದಿಲ್ಲ ಒಂದು ಭಾಗದಲ್ಲಿ ನಡೆಯುತ್ತಲೆಯಿದೆ. ಕಾಡಂಚಿನ ಗ್ರಾಮಗಳ ಜನರು ಜೀವಭಯದಲ್ಲಿ ಕಾಲ ಕಳೆಯುವ ಪರಿಸ್ಥಿ ನಿರ್ಮಾಣವಾಗಿದೆ.
ಕಳೆದ ಒಂದು ತಿಂಗಳಿಂದ ಸರಗೂರು ಅರಣ್ಯವಲಯದ ಕಾಡಂಚಿನ ಗ್ರಾಮಗಳಾದ ನಾಡಹಾಡಿ, ಲಂಬಾಣಿ ಕಾಲೋನಿ, ಬಿ ಮಟ್ಟಕೆರೆ , ಮಳಿಯೂರು ಭಾಗದಲ್ಲಿ ಅಲ್ದೆ ಗ್ರಾಮಗಳಲ್ಲಿ ಚಿರತೆ, ಹುಲಿಗಳ ದಾಳಿಗಳು ನಡೆಯುತ್ತಿದ್ರು.. ಅರಣ್ಯ ಇಲಾಖೆಯವರು ಮಾತ್ರ ಯಾವುದೇ ಕ್ರಮ ಜರುಗಿಸುತ್ತಿಲ್ಲ ಅಂತ ಜನರು ಆರೋಪಿಸುತ್ತಿದ್ದಾರೆ. ಅಲ್ದೆ ರಕ್ಕಸ ಚಿರತೆ ಮತು ಹುಲಿಗಳಿಂದ ಮನುಷ್ಯರ ಜೀವಕ್ಕೆ ಕುತ್ತು ಬರುವ ಮೊದಲು ಎಚ್ಚೆತ್ತುಕೊಳ್ಳಿ ಅಂತ ಆಕ್ರೋಶವನ್ನು ಹೊರ ಹಾಕ್ತಿದ್ದಾರೆ.ಕೇವಲ ಜಬ ಬೀದಿಗೆ ಬಂದಾಗ ಕಾಟಾಚಾರಕ್ಕೆ ಕೂಂಬಿಂಗ್ ಮಾಡಿ ನುಸುಳಿಕೊಳ್ತಿರೋ ಅರಣ್ಯ ಅಧಿಕಾರಿಗಳ ವಿರುದ್ಧ ಜನ ದಂಗೆ ಏಳುವ ಮೊದಲೇ ಇದಕ್ಕೆ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು, ಜಿಲ್ಲಾ ಅರಣ್ಯಾಧಿಕಾರಿ, ರೇಂಜ್ ಫಾರೆಸ್ಟ್ ಅಧಿಕಾರಿಗಳು ಕ್ರಮಜರುಗಿಸಲಿ ಅನ್ನೋದೆ ನಮ್ಮ ಕಳಕಳಿ ಕೂಡ..