Top Newsರಾಜಕೀಯರಾಜ್ಯಸುದ್ದಿ

75% ಮೀಸಲಾತಿಗೆ ಸಂತೋಷ್ ಲಾಡ್ ಡಿಮ್ಯಾಂಡ್

ಬೆಂಗಳೂರು: ರಾಜ್ಯದಲ್ಲಿ ಶೇ. 75 ರಷ್ಟು ಮೀಸಲಾತಿ ನೀಡಬೇಕೆಂದು ಸಚಿವ ಸಂತೋಷ್ ಲಾಡ್ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಶೋಷಿತ ವರ್ಗಗಳು ಅಭಿವೃದ್ಧಿಯಾಹಬೇಕು ಅಂದ್ರೆ ಕನಿಷ್ಟ 75ರಷ್ಟು ಮೀಸಲಾತಿ ಕೊಡಬೇಕು ಎಂದು ಹೇಳಿದರು.

ಶೋಷಿತ ವರ್ಗಗಳು, ಅಹಿಂದ ವರ್ಗಗಳು ಎಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಬೇಕು. ತಮಿಳುನಾಡಿನಲ್ಲಿ ಶೇ.69 ರಷ್ಟು ಶೇಕಡಾ ಇದೆ. ಶೋಷಿತ ವರ್ಗಗಳು ಅಭಿವೃದ್ಧಿಯಾಗಬೇಕೆಂದರೆ ದೇಶದಲ್ಲಿ ವಿಶೇಷಿತವಾಗಿ 75 ಶೇಕಡಾ ಮೀಸಲಾತಿ ಘೋಷಿಸಬೇಕು ಎಂದು ನಾನು ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದ್ದೀನಿ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button