ಸಂತೋಷ್ ಲಾಡ್… ಎನರ್ಜಟಿಕ್ ರಾಜಕಾರಣಿ ಅಂತಲೇ ಪಾಪ್ಯೂಲ್ಯಾರಿಟಿ ಪಡೆದಿರುವ ನಾಯಕನಿಗೆ 49ನೇ ಹುಟ್ಟುಹಬ್ಬವನ್ನ ನೂತನ ಜಿಲ್ಲೆ ವಿಜಯನಗರದ ಹೊಸಪೇಟೆ ತಾಲೂಕಿನ ಡಾ.ಪುನೀತ್ ಮೈದಾನದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯ್ತು. ಇದೊಂದು ಅರ್ಥ ಪೂರ್ಣ ಕಾರ್ಯಕ್ರಮವಾಗಿದ್ದು, ಸಂತೋಷ್ ಲಾಡ್ ಅಭಿಮಾನಿಗಳು, ಕಾರ್ಯಕರ್ತರು, ಹಾಗೂ ಕಾಂಗ್ರೆಸ್ ಮುಖಂಡರು, ಸೇರಿದಂತೆ ಪಕ್ಷಾತೀತವಾಗಿ ಲಕ್ಷಾಂತರ ಮಂದಿ ಭಾಗವಹಿಸಿದ್ರು.
ನಗರದ ತುಂಬಾ ಅಂಬೇಡ್ಕರ್, ಬಸವಣ್ಣ ಹಾಗೂ ಸಂತೋಷ್ ಲಾಡ್ ಬ್ಯಾನರ್ ಗಳು ರಾರಾಜಿಸುತ್ತಿದ್ವು. ಇದೊಂದು ಅರ್ಥಪೂರ್ಣ ಕಾರ್ಯಕ್ರಮವನ್ನಾಗಿ ಆಚರಿಸಬೇಕೆಂಬ ಉದ್ದೇಶದಿಂದ ಹುಟ್ಟುಹಬ್ಬಕ್ಕೆ 3 ದಿನ ಇರುವಂತೆಯೇ ಪೂರ್ವ ತಯಾರಿ ಮಾಡಲಾಗಿತ್ತು. ಪ್ರಮುಖವಾಗಿ ಈ ಹುಟ್ಟುಹಬ್ಬದ ಕಾರ್ಯಕ್ರಮದ ಮೂಲಕ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಆಶಯವನ್ನ ಸಾರ್ವನಿಕರಿಗೆ ತಿಳಿಸುವ ಉದ್ದೇಶ ಹುಟ್ಟುಹಬ್ಬದ ಹಿಂದೆ ಅಡಗಿತ್ತು. ಕಾರ್ಯಕ್ರಮದ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ತಿಳಿಸಿದ್ರು
ಪಕ್ಷಾತೀತವಾಗಿ ನಿರ್ವಹಿಸುವ ಜವಬ್ದಾರಿಯನ್ನು ಸಂತೋಷ ಲಾಡ್ ಫೌಂಡೇಷನ್ ವಹಿಸಿಕೊಂಡಿದೆ. ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ದತೆಯನ್ನು ಕೈಗೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಸಂತೋಷ್ ಲಾಡ್ ಫೌಂಡೇಷನ್ ವತಿಯಿಂದ ವಿಜೃಂಭಣೆಯಿಂದ ಅರ್ಥ ಪೂರ್ಣ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಹುಟ್ಟು ಹಬ್ಬದ ಅಂಗವಾಗಿ ಸಂತೋಷ್ ಲಾಡ್ ಫೌಂಡೇಶನ್ ಮುಂದಾಳತ್ವದಲ್ಲಿ ಹೊಸಪೇಟೆಯ ಡಾ. ಪುನೀತ್ ರಾಜಕುಮಾರ್ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಯಕ್ರಮದ ಹೈಲೈಟ್ ಅಂದ್ರೆ ಅದು ವಿದ್ಯಾರ್ಥಿ ಮುಖಂಡ ಕನ್ನಯ್ಯಕುಮಾರ್ ಹಾಗೂ ರಾಷ್ಟ್ರೀಯ ದಲಿತ ಅಧಿಕಾರ ಮಂಚ್ ನ ಜೀಜ್ಞೇಶ್ ಮೇವಾನಿ ಭಾಗವಹಿಸಿದ್ರು. ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕನ್ಹಯ್ಯ ಕುಮಾರ್ ಭಾಷಣ ಮಾಡುತ್ತಾ ಸಂತೋಷ ಲಾಡ್ ಗೆ ಹುಟ್ಟು ಹಬ್ಬದ ಶುಭಾಷಯ ತಿಳಿಸಿದರು. ಜೊತೆಗೆ ನಿಮ್ಮ ಹೋರಾಟ ನಿರಂತರವಾಗಿರಲಿ ಎಂದ ಕನ್ಹಯ್ಯ ಕುಮಾರ ಶುಭ ಕೋರಿದರು.
ಆಡಿಯೋ ಮೂಲಕ ಜನರಿಗೆ ಬುದ್ದ, ಬಸವಣ್ಣ ಮತ್ತು ಅಂಬೇಡ್ಕರ್ ರವರ ಆಶಯಗಳನ್ನ ತಲುಪಿಸಲು ಧ್ವನಿ ಸುರುಳಿ ಬಿಡುಗಡೆ ಮಾಡಲಾಯ್ತು. ಈ ಐತಿಹಾಸಿಕ ಕಾರ್ಯಕ್ರಮವನ್ನ ಕಾರ್ಮಿಕ ಸಚಿವ ಸಂತೋಷ್ ಲಾಡ್ ಉದ್ಘಾಟಿಸಿದ್ರು. ಇದೇ ವೇಳೆ ಸಚಿವ ನಾಗೇಂದ್ರ ಸಾಥ್ ನೀಡಿದ್ರು. ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಬಳಿಕ ಅಂಬೇಡ್ಕರ್, ಬಸವಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯ್ತು. ಶಾಸಕರಾದ ಡಾ.ಎನ್ ಟಿ ಶ್ರೀನಿವಾಸ್, ಎಂಪಿ ಲತಾ, ತುಕಾರಂ, ಜೆ.ಎನ್ ಗಣೇಶ್ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇನ್ನು ಇದೇ ವೇದಿಕೆಯಲ್ಲಿ ಕಲಘಟಗಿ ಕ್ಷೇತ್ರದ ಸಾವಿರಾರು ಜನರಿಗೆ ನೆರವಾಗಿರುವ ಸಚಿವ ಸಂತೋಷ್ ಲಾಡ್ ರವರು ಹೊಸಪೇಟೆಯೊಲ್ಲೂ ತಮ್ಮ ಸಮಾಜ ಸೇವೆಯ ಕಿರು ಪರಿಚಯದ ಹತ್ತು ನಿಮಿಷದ ವಿಡಿಯೋ ತುಣುಕನ್ನ ಜನ ನೋಡಿ ಬೆರಗಾದರು. ಸಂತೋಷ್ ಲಾಡ್ ಗೆ ಅಭಿಮಾನಿಗಳು ಹಾಕಿದ ಜೈಕಾರದ ಘೋಷಣೆಗಳು ಮುಗಿಲು ಮುಟ್ಟಿದ್ವು. ಇನ್ನು ಎಐಸಿಸಿ ಸದಸ್ಯ ಕೆ.ರಾಜು ಸಂತೋಷ್ ಲಾಡ್ ಅವರ ಸಮಾಜಮುಖಿ ಕೆಲಸಗಳನ್ನ ಕೊಂಡಾಡಿದರು.
ಕಾರ್ಮಿಕ ಸಚಿವರಾಗಿ ಸಂತೋಷ್ ಲಾಡ್, ಯುವಜನತೆಯನ್ನ ಮನದಲ್ಲಿಟ್ಟುಕೊಂಡು ಹೆಚ್ಚಿನ ಆಧ್ಯತೆ ನೀಡುವ ದೃಷ್ಟಿಯಲ್ಲಿ ಕೆಲಸ ಮಾಡುತ್ತಿರೋದು ಗಮನಾರ್ಹ. ಅವರ ಸೇವೆ ನಿರಂತರವಾಗಿರಲಿ ನೂರು ಕಾಲ ಸುಖವಾಗಿ ಬಾಳಲಿ ಅಂತಲೇ ಎಲ್ಲರೂ ಹಾರೈಸಿದರು. ಇನ್ನು ವಿಶೇಷವಾಗಿ ಸಂತೋಷ್ ಲಾಡ್ ಕಾರ್ಯಕರ್ತರಿಗೆ ಸೂಚನೆ ನೀಡಿದ್ದರು. ಯಾರು ಹಾರ ತರುವಂತಿಲ್ಲ, ಕೇಕ್ ತರುವಂತಿಲ್ಲ, ಪೇಟಾಗಳನ್ನ ತರುವಂತಿಲ್ಲ ಎಂದು ಆದೇಶಿಸಿದ್ರು. ಇವುಗಳ ಬದಲಾಗಿ ಅದೇ ದುಡ್ಡಲ್ಲಿ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನ ಕೊಡಿಸಿ ಶಿಕ್ಷಣಕ್ಕೆ ನೆರವಾಗಿ, ಬಡ ರೋಗಿಗಳಿಗೆ ಆಸರೆಯಾಗಿ ಎಂದು ತಿಳಿಸಿದ್ರು. ನಲ್ಮೆಯ ಆರ್ಶಿವಾದ ಮಾತ್ರ ನನ್ನ ಮೇಲಿರಲಿ ಎಂದಿದ್ರು.. ಒಟ್ನಲ್ಲಿ ಸಚಿವ ಸಂತೋಷ್ ಲಾಡ್ ಹುಟ್ಟು ಹಬ್ಬ ಒಂದು ಐತಿಹಾಸಿಕ ಮತ್ತು ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿ ಬಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.