Wednesday, April 30, 2025
32 C
Bengaluru
LIVE
ಮನೆಜಿಲ್ಲೆಬಿಗ್ ಬಾಸ್​ನಿಂದ ಹೊರ ಬಂದ ಸಂಗೀತಾ ಮೊದಲ ರಿಯಾಕ್ಷನ್

ಬಿಗ್ ಬಾಸ್​ನಿಂದ ಹೊರ ಬಂದ ಸಂಗೀತಾ ಮೊದಲ ರಿಯಾಕ್ಷನ್

ಬಿಗ್ ಬಾಸ್ : ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಮುಗಿದ ಬಳಿಕ ಯಾರ ಕೈಗೂ ಸಿಗಲಿಲ್ಲ. ಅವರು ಸದ್ಯ ತಮ್ಮ ತಮ್ಮ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಅವರು ಈ ಬಾರಿಯು ಬಿಗ್ ಬಾಸ್​ನಲ್ಲಿ ಕಪ್ ಗೆಲ್ಲುತ್ತೇನೆ ಎನ್ನುವ ಭರವಸೆಯಲ್ಲಿದ್ದರು. ಶ್ರುತಿ ಬಳಿಕ ಅವರ ಕನಸು ಕನಸಾಗಿಯೇ ಉಳಿದಿದೆ. ಎರಡನೇ ರನ್ನರ್​ಅಪ್ ಸ್ಥಾನಕ್ಕೆ ಅವರು ಖುಷಿಪಟ್ಟುಕೊಂಡಿದ್ದಾರೆ. ಬಿಗ್ ಬಾಸ್​ ಮನೆಯಿಂದ ಹೊರ ಬಂದ ಬಳಿಕ ಸಂಗೀತಾ ಮೊದಲ ಬಾರಿಗೆ ರಿಯಾಕ್ಟ್ ಮಾಡಿದ್ದಾರೆ .

ಕಾರ್ತಿಕ್ ಮಹೇಶ್, ವಿನಯ್ ಗೌಡ, ತುಕಾಲಿ ಸಂತು, ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಮಾಧ್ಯಮದವರ ಕೈಗೆ ಸಿಕ್ಕರು. ಅವರು ಈಗಾಗಲೇ ತಮ್ಮ ಅಭಿಪ್ರಾಯ ಹಮಚಿಕೊಂಡಿದ್ದಾರೆ. ಆದರೆ, ಸಂಗೀತಾ ಶೃಂಗೇರಿ ಅವರು ಯಾರ ಕೈಗೂ ಸಿಗುತ್ತಿಲ್ಲ. ಅವರು ಸದ್ಯ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.
ನನ್ನ ಪ್ರೀತಿಯ ಅಭಿಮಾನಿಗಳಿಗೆ, ಪ್ರೋತ್ಸಾಹಕರಿಗೆ, ಕನ್ನಡ ಜನತೆಗೆ ನಿಮ್ಮ ಸಂಗೀತಾ ಶೃಂಗೇರಿ ಮಾಡುವ ನಮಸ್ಕಾರಗಳು. ಎಲ್ಲಾ ಹೇಗಿದ್ದೀರಿ.? ನಮ್ಮ ಬಿಗ್ ಬಾಸ್ ಹೇಗಿತ್ತು? ನನ್ನ ಬಿಗ್ ಬಾಸ್ ಜರ್ನಿ ಅಂತೂ ನಿಮಗೆ ಗೊತ್ತೇ ಇದೆ. ನೀವು ಇಲ್ಲಿ ನನಗೆ ಕೊಟ್ಟ ಪ್ರೀತಿ, ಸಹಕಾರ ಈಗ ತಿಳಿಯುತ್ತಿದೆ. ನಿಮಗೆ ಹೇಗೆ ನನ್ನ ಧನ್ಯವಾದ ಅರ್ಪಿಸಲಿ ಎಂಬುದು ತಿಳಿಯದಾಗಿದೆ.

ನನ್ನ ಬೆನ್ನುಲುಬಾಗಿ ನೀಮತು ನೀವು ತೋರಿದ ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ ನಾನು ಎಂದಿಗೂ ಆಭಾರಿ. ಬಿಗ್ ಬಾಸ್ ಟ್ರೋಫಿ ನನಗೆ ಸಿಗದಿರಬಹುದು, ನಿಮ್ಮ ಪ್ರೀತಿ ನನಗೆ ನಿಜವಾದ ಗೆಲುವನ್ನೇ ತಂದುಕೊಟ್ಟಿದೆ. ನಿಮ್ಮಿಂದ ನಾನೇ ವಿನ್ನರ್ ಎನಿಸುತ್ತದೆ. ಇದಕ್ಕೆ ಇದಬೇಕು ನಮ್ಮ ಅಣ್ಣಾವ್ರು ಅಭಿಮಾನಿಗಳನ್ನು ದೇವರಂತೆ ಕಂಡಿದ್ದು ಎಂದು ಪೋಸ್ಟ್ ಮಾಡಿದ್ದಾರೆ.

ಸಂಗೀತಾ ಶೃಂಗೇರಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು ಹಿಂಬಾಲಿಸುವವರ ಸಂಖ್ಯೆ ಕೂಡ ಹೆಚ್ಚಿದೆ. ಇದರಿಂದ ಸಾಕಷ್ಟು ಖುಷಿಯಾಗಿದ್ದಾರೆ. ಆದರೆ, ಕಪ್ ಗೆಲ್ಲಬೇಕು ಎನ್ನುವ ಕನಸು ಈಡೇರಲಿಲ್ಲ. ಈ ವಿಚಾರದಲ್ಲಿ ಅವರಿಗೆ ಬೇಸರ ಇದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments