Big Boss Kannada 10 : ಮಹಿಳಾ ಸ್ಪರ್ಧಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ ಎಂದು ಸಂಗೀತಾ ಹೇಳಿದ್ದಾರೆ. ಆದರೆ, ಇದನ್ನು ವಿನಯ್ ಒಪ್ಪಿಲ್ಲ. ಸಂಗೀತಾ ಜೊತೆಗೆ ವಿನಯ್ ಮಾತಿಗೆ ಇಳಿದಿದ್ದಾರೆ.
ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಗುರಿತಿಸಿಕೊಂಡಿದ್ದಾರೆ. ಅನಿಸಿದ್ದನ್ನು ನೇರವಾಗಿ ಹೇಳೋದು ಅವರ ವ್ಯಕ್ತಿತ್ವ . ಈ ಕಾರಣದಿಂದಲೇ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಆದರೆ , ಬಿಗ್ ಬಾಸ್ ಮನೆಯಲ್ಲಿರುವ ಅನೇಕರಿಗೆ ಅವರನ್ನು ಕಂಡರೆ ಆಗೋದಿಲ್ಲ. ವಿನಯ್ ಜೊತೆ ಅವರು ದ್ವೇಷ ಕಟ್ಟಿಕೊಂಡಿದ್ದರು. ಹೊಸ ವರ್ಷದ ಸಂದರ್ಭದಲ್ಲಿ ಇಬ್ಬರೂ ಒಂದಾಗಿದ್ದರು. ಆದರೆ, ಇದು ಹೆಚ್ಚು ದಿನ ಉಳಿದಿಲ್ಲ. ಟಾಸ್ಕ್ ವಿಚಾರಕ್ಕೆ ಬಂದರೆ ಇಬ್ಬರೂ ಕಿತ್ತಾಡುತ್ತಿದ್ದರು. ಮಹಿಳಾ ಸ್ಪರ್ಧಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ ಎಂದು ಸಂಗೀತಾ ಹೇಳಿದ್ದಾರೆ. ಆದರೆ, ಇದನ್ನು ವಿನಯ್ ಒಪ್ಪಲಿಲ್ಲ. ಅವರು ಸಂಗೀತಾ ಜೊತೆಗೆ ಮಾತಿಗೆ ಇಳಿದಿದ್ದಾರೆ.