Wednesday, September 10, 2025
23.5 C
Bengaluru
Google search engine
LIVE
ಮನೆUncategorizedಸಂಗಮೇಶ್ ಹೇಳಿಕೆ ಇಡೀ ಕಾಂಗ್ರೆಸ್ ಹೇಳಿಕೆ ಆಗಿದೆ- ಆರ್​​ ಅಶೋಕ್​​

ಸಂಗಮೇಶ್ ಹೇಳಿಕೆ ಇಡೀ ಕಾಂಗ್ರೆಸ್ ಹೇಳಿಕೆ ಆಗಿದೆ- ಆರ್​​ ಅಶೋಕ್​​

ನವದೆಹಲಿ: ಮುಂದಿನ ಜನ್ಮದಲ್ಲಿ ನಾನು ಮುಸ್ಲಿಂ ಆಗಿ ಹುಟ್ಟಬೇಕು ಎಂದಿದ್ದ ಭದ್ರಾವತಿ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಆರ್​. ಅಶೋಕ್​ ಕರ್ನಾಟಕ ರಾಜ್ಯ ಅವಮಾನ ಪಡುವಂತಹ ಹೇಳಿಕೆ ಶಾಸಕ ಸಂಗಮೇಶ್ ಕೊಟ್ಟಿದ್ದಾರೆ.

ಸಂಗಮೇಶ್ ಹೇಳಿಕೆ ನೋಡಿದರೆ ಕಾಂಗ್ರೆಸ್‌ನ ಎಲ್ಲಾ ಶಾಸಕರು ಮುಸ್ಲಿಮರು ಆಗಬೇಕು ಅಂತಾ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದಾರಾ? ಇದೊಂದು ಮತಾಂತರ ಮಾಡುವ ಕೆಲಸ ಅನ್ನಿಸುತ್ತದೆ. ಸಂವಿಧಾನ ಅಡಿಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ಈ ರೀತಿ ಹೇಳಿಕೊಡುತ್ತಿದ್ದಾರೆ. ಸಂಗಮೇಶ್ ಹೇಳಿಕೆ ಇಡೀ ಕಾಂಗ್ರೆಸ್ ಹೇಳಿಕೆ ಆಗಿದೆ. ಕರ್ನಾಟಕ ಸರ್ಕಾರ ಸತ್ತು ಹೋಗಿದೆ ಎಂದು ಕಿಡಿಕಾರಿದರು.

ಹಿಂದೂ ಅಂತಾ ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಮುಸ್ಲಿಂ ಓಲೈಕೆ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಬೆಂಕಿ ಹಚ್ಚುವ ಹೇಳಿಕೆ ಆಗದೆ. ನಾಳೆ ನಾವು ಧರ್ಮದ ಉಳಿವಿಗಾಗಿ ನಾವು ಹೋಗುತ್ತಿದ್ದೇವೆ. ಇದೊಂದು ತಾಲಿಬಾನ್ ಸರ್ಕಾರ. ಹಿಂದೂಗಳನ್ನು ದ್ವಿತೀಯ ದರ್ಜೆ ನಾಗರಿಕರಾಗಿಸಿದ್ದಾರೆ. ಮಹದೇವಪ್ಪ ಅವರೇ, ನೀವು ಮನೆಯಲ್ಲಿ ಇದ್ರೆ ಸಾಕು, ಕರ್ನಾಟಕ ತಣ್ಣಗಿರುತ್ತೆ. ಕರ್ನಾಟಕ ಧಗಧಗ ಉರಿಯುವುದು ತಪ್ಪುತ್ತದೆ. ಮತಾಂಧರು ಈ ರೀತಿ ಹೇಳಿಕೆ ನೀಡಲು ನೀವೇ ಕಾರಣ. ಬಿಜೆಪಿ ಸರ್ಕಾರ ಇದ್ದಿದ್ದರೆ ಇಂಥವರನ್ನು ಒದ್ದು ಒಳಗಡೆ ಹಾಕುತ್ತಿದ್ದೆವು. ಪಾಕ್ ಜಿಂದಾಬಾದ್ ಅನ್ನೋ ಹೇಳಿಕೆಗಳು ಕಾಂಗ್ರೆಸ್ ಪ್ರಚೋದನೆಯಿಂದಲೇ ಬರುತ್ತಿರುವುದು ಎಂದು ವಾಗ್ದಾಳಿ ನಡೆಸಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments