Top Newsಸಿನಿಮಾಸುದ್ದಿ

Allu Arjun : ಇದೇ ಕಾರಣಕ್ಕೆ ಟಾಲಿವುಡ್ ನಟ ಅಲ್ಲು ಅರ್ಜುನ್ ಅರೆಸ್ಟ್‌

ಹೈದರಾಬಾದ್‌: ಪುಷ್ಪ 2’ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿಂತೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಪ್ರಕರಣ ಕುರಿತು ಈ ಮೊದಲೇ ಹೈದರಾಬಾದ್, ಚೀಕಟಪಲ್ಲಿ ಪೊಲೀಸರು ನೊಟೀಸ್ ನೀಡಿದ್ದರು. ಆದರೆ ನೊಟೀಸ್​ಗೆ ಅಲ್ಲು ಅರ್ಜುನ್ ಉತ್ತರ ನೀಡಿರಲಿಲ್ಲ ಎನ್ನಲಾಗಿದೆ. ಆದರೆ ಅಲ್ಲು ಅರ್ಜುನ್, ಪ್ರಕರಣವನ್ನು ರದ್ದು ಮಾಡುವಂತೆ ತೆಲಂಗಾಣ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದರು. ಆದರೆ ಅರ್ಜಿಯ ವಿಚಾರಣೆ ಇನ್ನೂ ನಡೆದಿಲ್ಲ.

ಈಗಾಗಲೇ ಇದೇ ಪ್ರಕರಣದಲ್ಲಿ ಸಂಧ್ಯಾ ಚಿತ್ರಮಂದಿರದ ಮಾಲೀಕ, ಚಿತ್ರಮಂದಿರದ ಮ್ಯಾನೇಜರ್ ಹಾಗೂ ಕಾಲ್ತುಳಿತ ನಡೆದ ದಿನ ಅಲ್ಲು ಅರ್ಜುನ್ ಜೊತೆಗೆ ಇದ್ದ ಕೆಲವು ಬೌನ್ಸರ್​ಗಳನ್ನು ಸಹ ಈಗಾಗಲೇ ಬಂಧಿಸಲಾಗಿದೆ. ಅಲ್ಲು ಅರ್ಜುನ್ ವಿರುದ್ಧ 105, 118 (5) ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಅಲ್ಲು ಅರ್ಜುನ್ ಮನೆಗೆ ಹೋಗಿ, ಅವರ ಬೆಡ್​ರೂಂ ಬಳಿಗೆ ಹೋಗಿ ಅಲ್ಲು ಅರ್ಜುನ್ ಅನ್ನು ಕರೆತರಲಾಗಿದೆ. ಅಲ್ಲು ಅರ್ಜುನ್ ಪೊಲೀಸ್ ಜೀಪು ಹತ್ತುವ ಮುಂಚೆ, ಈ ಬಗ್ಗೆ ಅಲ್ಲು ಅರ್ಜುನ್ ಪೊಲೀಸರು ತಮ್ಮನ್ನು ಬಂಧಿಸಿದ ವಿಧಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ನಂತರ ಅಲ್ಲು ಅರ್ಜುನ್ ಪೊಲೀಸ್ ಜೀಪು ಹತ್ತುವ ವೇಳೆ, ಅವರ ತಂದೆ ಅಲ್ಲು ಅರವಿಂದ್ ಸಹ ಪೊಲೀಸ್ ಜೀಪು ಹತ್ತಿದ್ದರು, ಆದರೆ ಪೊಲೀಸರು ಅವರನ್ನು ಕೆಳಗೆ ಇಳಿಸಿ, ಕೇವಲ ಅಲ್ಲು ಅರ್ಜುನ್ ಅನ್ನು ಮಾತ್ರವೇ ಬಂಧಿಸಿ ಕರೆದೊಯ್ದಿದ್ದಾರೆ.

Comments (0)

Your email address will not be published. Required fields are marked *

Back to top button