ಬೆಂಗಳೂರು : ಜ್ಞಾನಭಾರತಿ ಕ್ಯಾಂಪಸ್ ಆವರಣದಲ್ಲಿ ಗಂಧದ ಮರ ಕಡಿದು ಮಾರುತ್ತಿದ್ದ ಆರೋಪಿಯನ್ನ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.ರಾಮನಗರ ಮೂಲದ ಸಾಕಯ್ಯ ಬಂಧಿತ ಆರೋಪಿಯಾಗಿದ್ದು, ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗಳೂರು ಯೂನಿವರ್ಸಿಟಿಯಲ್ಲಿ ಮರ ಕಡಿದು ಎಸ್ಕೇಪ್ ಆಗಿದ್ದ. ರಾತ್ರೋ ರಾತ್ರಿ ಗಂಧದ ಮರ ಕಡಿದು ಮರಗಳನ್ನ ಅಲ್ಲೆ ಪಕ್ಕದಲ್ಲೆ ಮುಚ್ಚಿ ಎಸ್ಕೇಪ್ ಆಗಿದ್ದ. ಪೊಲೀಸರು ತನಿಖೆ ಮಾಡ್ತಿದ್ದಾರೆ ಅಂತ ಕಡಿದ ಮರಗಳನ್ನ ತೆಗೆದುಕೊಳ್ಳಲು ಆರೋಪಿ ತಡ ಮಾಡಿದ್ದ.ಜ್ಞಾನಭಾರತಿ ಪೊಲೀಸರು ಆರೋಪಿಯನ್ನ ಜಾಡು ಹಿಡಿದು ರಾಮನಗರ ತೆರಳಿದ್ರು. ಈ ವೇಳೆ ರಾಮನಗರ ಕಾಡಿನಲ್ಲಿ ಅವಿತು ಕುಳಿತಿದ್ದ ಆರೋಪಿಗಳನ್ನ ಬೆನ್ನಟ್ಟಿದ್ದ ಪೊಲೀಸರು, ಈ ವೇಳೆ ಆರೋಪಿ ಸಾಕಯ್ಯ ಬಂಧನವಾಗಿದ್ದ ಇನ್ನೂ ಕೆಲವರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಸದ್ಯ ಉಳಿದ ಇನ್ನು ಇಬ್ಬರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಬಂಧಿತರಿಂದ ಒಟ್ಟು 115 ಕೆಜಿ ಶ್ರೀಗಂಧ ಮರ ವಶಕ್ಕೆ ಪಡೆಯಲಾಗಿದೆ.
ಇನ್ನೂ ಇದೇ ರೀತಿ ಮತ್ತೊಂದು ಪ್ರಕರಣದಲ್ಲಿ ಗಂಧದ ತುಂಡುಗಳನ್ನ ಅಕ್ರಮ ಸಾಗಾಟ ಮಾಡ್ತಿದ್ದ ಆರೋಪಿಯನ್ನ ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಕನಕಪುರ ರಸ್ತೆ ಕಡೆಯಿಂದ ಉತ್ತರಹಳ್ಳಿ ಕಡೆಗೆ ಸಾಗಾಟದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಒಬ್ಬ ಆರೋಪಿಯನ್ನ ಬಂಧನ ಮಾಡಿದ್ದಾರೆ. ಆತನ ವಿಚಾರಣೆ ವೇಳೆ ಕಾಡಿಗೆ ಸೌದೆ ತರುವಂತೆ ಹೋಗಿ ಗಂಧದ ಕಳ್ಳತನ ಮಾಡ್ತಿದ್ರಂತೆ. ಕೊಡಗು, ವಿರಾಜಪೇಟೆ, ಸಿದ್ದಾಪುರ ಭಾಗದ ಅರಣ್ಯ ಪ್ರದೇಶದಲ್ಲಿ ಗಂಧದ ಮರ ಕಳ್ಳತನ ಮಾಡಿರೋದು ಬೆಳಕಿಗೆ ಬಂದಿದೆ. ನಂತರ ಪಿರಿಯಾಪಟ್ಟಣದ ತನ್ನ ಮನೆಯಲ್ಲಿ ಬಚ್ಚಿಡುತ್ತಿದ್ದ ಆರೋಪಿ ನಂತರ ಗಿರಾಕಿಗಳನ್ನ ಹುಡುಕಿ ಮಾರಾಟ ಮಾಡುತ್ತಿದ್ದನಂತೆ ಸದ್ಯ ಆರೋಪಿ ಶರತ್ ನಿಂದ 14,60,000 ಮೌಲ್ಯದ 146 ಕೆಜಿ ಶ್ರೀಗಂಧ ವಶಕ್ಕೆ ಪಡೆದಿದ್ದಾರೆ. ಉಳಿದಂತೆ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ.