ದರ್ಶನ್‌ಗೆ ಹೈಕೋರ್ಟ್ ವಾರ್ನಿಂಗ್
ದರ್ಶನ್ ಫಿಸಿಯೋಥೆರಪಿಗೆ ಒಳಗಾಗುತ್ತಿದ್ದಾರೆಂದು ವೈದ್ಯರ ವರದಿ ಇದೆ. ಸರ್ಜರಿ ಅಗತ್ಯವೆಂಬ ಬಳ್ಳಾರಿ ವೈದ್ಯರ ವರದಿಯನ್ನ ಬಿಜಿಎಸ್ ವೈದ್ಯರು ದೃಢಪಡಿಸಿದ್ದಾರೆ. ಸರ್ಜರಿಗಾಗಿ ದರ್ಶನ್‌ರನ್ನ ಸಿದ್ಧಪಡಿಸಲಾಗುತ್ತಿದೆ ಎಂದು ವರದಿ ನೀಡಿದ್ದಾರೆ. ದರ್ಶನ್ ವೈದ್ಯಕೀಯ ಪರಿಸ್ಥಿತಿಯನ್ನ ಈ ಹಂತದಲ್ಲಿ ಸಂದೇಹಿಸಲು ಕಾರಣಗಳಿಲ್ಲ. ರೆಗ್ಯುಲರ್ ಜಾಮೀನಿಗೂ, ವೈದ್ಯಕೀಯ ಕಾರಣದ ಜಾಮೀನಿಗೂ ವ್ಯತ್ಯಾಸವಿದೆ. ಒಂದು ವೇಳೆ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ್ದರೆ ಪರಿಣಾಮ ಎದುರಿಸಬೇಕು. ಕಾನೂನಿನ ಹಾದಿಯಲ್ಲೇ ಪರಿಣಾಮ ಎದುರಿಸಬೇಕು.
ದರ್ಶನ್ ಸೇರಿದಂತೆ 7 ಮಂದಿ ಆರೋಪಿಗಳಿಗೆ ರೆಗ್ಯುಲರ್ ಜಾಮೀನು ಸಿಕ್ಕಿರೋದನ್ನ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಮತ್ತು ಕಾನೂನು ತಜ್ಞರ ಜೊತೆಗೆ ಚರ್ಚೆಗೆ ತನಿಖಾಧಿಕಾರಿಗಳು ಮುಂದಾಗಿದ್ದಾರೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವ ಬಗ್ಗೆ ಚರ್ಚಿಸುತ್ತಿದ್ದಾರೆ..
ಇನ್ನು, ಜಾಮೀನು ಪಡೆದಿರೋ ಪವಿತ್ರಾಗೌಡ, ಪ್ರದೋಶ್, ಅನುಕುಮಾರ್, ಜಗದೀಶ್, ಲಕ್ಷ್ಮಣ್ ಮತ್ತು ಮ್ಯಾನೇಜರ್ ನಾಗರಾಜ್ ಜಾಮೀನು ಷರತ್ತುಗಳನ್ನ ಪೂರೈಸಬೇಕಿದೆ. ನಾಳೆಯೇ (ಡಿಸೆಂಬರ್ 15) ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆಯಿದೆ.


