Sunday, December 7, 2025
25.5 C
Bengaluru
Google search engine
LIVE
ಮನೆದೇಶ/ವಿದೇಶಸಂಚಾರ್ ಸಾಥಿ ಆ್ಯಪ್ ಕಡ್ಡಾಯವಲ್ಲ, ಡಿಲೀಟ್ ಮಾಡಬಹುದು- ಸಚಿವ ಜ್ಯೋತಿರಾದಿತ್ಯ

ಸಂಚಾರ್ ಸಾಥಿ ಆ್ಯಪ್ ಕಡ್ಡಾಯವಲ್ಲ, ಡಿಲೀಟ್ ಮಾಡಬಹುದು- ಸಚಿವ ಜ್ಯೋತಿರಾದಿತ್ಯ

ನವದೆಹಲಿ: ಸಂಚಾರ್​​​​ ಸಾಥಿ ಆ್ಯಪ್ಅನ್ನು​​​​​​​​ ಎಲ್ಲಾ ಹೊಸ ಮೊಬೈಲ್​​​ ಫೋನ್​ಗಳಲ್ಲಿ ಕಡ್ಡಾಯವಾಗಿ ಇನ್​​ಸ್ಟಾಲ್​​​​​​​​​​​ ಮಾಡಲು ದೂರು ಸಂಪರ್ಕ ಇಲಾಖೆ ಹ್ಯಾಂಡ್​​​ಸೆಟ್​​ ತಯಾರಕರಿಗೆ ಸೂಚಿಸಿದೆ.. ಸಂಚಾರ್‌ ಸಾಥಿ ಅಪ್ಲಿಕೇಶನ್‌ ಮೂಲಕ ಜನರ ಮೇಲೆ ಬೇಹುಗಾರಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ವಿಪಕ್ಷಗಳು ಟೀಕಿಸಿದ ಬೆನ್ನಲ್ಲೇ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸಂಚಾರ್​​​ ಸಾಥಿ ಅಪ್ಲಿಕೇಶನ್​​​​​​​​ ಕಡ್ಡಾಯವಲ್ಲ. ಬಳಕೆದಾರರು ತಮಗೆ ಬೇಡವಾದಲ್ಲಿ ಡಿಲೀಟ್​ ಮಾಡಬಹುದು ಎಂದು ಸ್ಪಷ್ಟನೆ ನೀಡಿದರು.

ಬಳಕೆದಾರರು ಸಂಚಾರ್ ಸಾಥಿ ಆ್ಯಪ್ ನಿಮ್ಮ ಫೋನ್ ನಲ್ಲಿ ಇಟ್ಟುಕೊಳ್ಳಲು ಬಯಸದಿದ್ದರೆ, ನೀವು ಅದನ್ನು ಡಿಲೀಟ್ ಮಾಡಬಹುದು, ಇದು ಆಪ್ಶನಲ್ ಎಂದು ಹೇಳಿದ್ದಾರೆ. ಈ ಅಪ್ಲಿಕೇಶನ್ ಅನ್ನು ಎಲ್ಲರಿಗೂ ಪರಿಚಯಿಸುವುದು ನಮ್ಮ ಕರ್ತವ್ಯ. ಅದನ್ನು ಅವರ ಮೊಬೈಲ್ ಗಳಲ್ಲಿ ಇಟ್ಟುಕೊಳ್ಳುವುದು ಅಥವಾ ಡಿಲೀಟ್ ಮಾಡುವುದು ಬಳಕೆದಾರರಿಗೆ ಸಂಬಂಧಿಸಿದ್ದು ಎಂದು ಸಿಂಧಿಯಾ ತಿಳಿಸಿದ್ದಾರೆ, ಸರ್ಕಾರವು ಸೈಬರ್ ವಂಚನೆಯನ್ನು ನಿಗ್ರಹಿಸಲು ವಿನ್ಯಾಸಗೊಳಿಸಲಾದ ಸಾಧನಕ್ಕೆ ವ್ಯಾಪಕ ಪ್ರವೇಶವನ್ನು ಖಚಿತಪಡಿಸುತ್ತಿದೆ ಎಂದು ಒತ್ತಿ ಹೇಳಿದರು.

ಈ ಆ್ಯಪ್‌ ಅನ್ನು ಇನ್‌ಸ್ಟಾಲ್‌ ಮಾಡಿದ ಬಳಿಕ ಮೊಬೈಲ್‌ ಕಳ್ಳತನವಾದರೆ ಅಥವಾ ಕಳೆದುಹೋದರೆ ಬ್ಲಾಕ್‌ ಮಾಡಬಹುದು. ಅಷ್ಟೇ ಅಲ್ಲದೇ ಈ ಫೋನ್‌ ದೇಶದ ಬೇರೆ ಕಡೆ ಬಳಕೆಯಾಗುತ್ತಿದ್ದರೂ ಕಾನೂನು ಸಂಸ್ಥೆಗಳಿಗೆ ಎಲ್ಲಿ ಈ ಫೋನ್‌ ಸಕ್ರಿಯವಾಗಿದೆ ಎಂಬ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ. ಸೈಬರ್ ಅಪರಾಧ, ನಕಲಿ ಐಇಎಂಐ ಸಂಖ್ಯೆ ಬಳಸಿ ನಡೆಸುವ ಕೃತ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಈ ಆ್ಯಪ್ ಇನ್‌ಸ್ಟಾಲ್‌ ಮಾಡಲು ಕಡ್ಡಾಯ ಮಾಡಿದೆ.

ನವೆಂಬರ್ 28 ರಿಂದ ಜಾರಿಗೆ ಬರುವಂತೆ ದೂರಸಂಪರ್ಕ ಇಲಾಖೆ ಹೊಸ ನಿರ್ದೇಶನಗಳನ್ನು ನೀಡಿತ್ತು. ಎಲ್ಲಾ ಮೊಬೈಲ್ ಹ್ಯಾಂಡ್‌ಸೆಟ್ ತಯಾರಕರು ಮತ್ತು ಆಮದುದಾರರು ಭಾರತದಲ್ಲಿ ಬಳಸಲು ಉದ್ದೇಶಿಸಲಾದ ಸಾಧನಗಳಲ್ಲಿ ಸರ್ಕಾರಿ ಸ್ವಾಮ್ಯದ ಸೈಬರ್ ಭದ್ರತಾ ಅಪ್ಲಿಕೇಶನ್ ಅನ್ನು ಸ್ಥಾಪಿಸಲು ಸೂಚಿಸಲಾಗಿತ್ತು. ಆದೇಶವನ್ನು ಕಾರ್ಯಗತಗೊಳಿಸಲು ಕಂಪನಿಗಳಿಗೆ 90 ದಿನಗಳು ಮತ್ತು ವರದಿಗಳನ್ನು ಸಲ್ಲಿಸಲು 120 ದಿನ ಸಮಯ ನೀಡಲಾಗಿದೆ.

ಸಂಚಾರ ಸಾಥಿ ಆ್ಯಪ್ ನಿರ್ಣಾಯಕ ಸೈಬರ್ ಭದ್ರತಾ ಸಾಧನವಾಗಿದೆ ಎಂದು ಸಮರ್ಥಿಸಿಕೊಂಡ ಸಿಂಧಿಯಾ, ಸಂಚಾರ್ ಸಾಥಿ ಪೋರ್ಟಲ್‌ನಲ್ಲಿ 20 ಕೋಟಿಗೂ ಹೆಚ್ಚು ಡೌನ್‌ಲೋಡ್‌ಗಳನ್ನು ಮತ್ತು 1.5 ಕೋಟಿ ಅಪ್ಲಿಕೇಶನ್ ಡೌನ್‌ಲೋಡ್‌ಗಳನ್ನು ಹೊಂದಿದೆ. ಟೆಲಿಕಾಂ ವಂಚನೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments