ಲಂಡನ್:ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮಿಗಳು ಲಂಡನ್ ಪ್ರವಾಸ ವೇಳೆದ ಲಂಡನ್ಲ್ಲಿರುವ ಬಸವೇಶ್ವರ ಸ್ಮಾರಕಕ್ಕೆ ನಮನ ಸಲ್ಲಿಸಿದರು.
ಅವರ ಜೊತೆಗೆ ಬ್ರಿಟನ್ ಹಿಂದೂ ವೇದಿಕೆ ಮುಖ್ಯಸ್ಥೆ ತೃಪ್ತಿ ಪಟೇಲ್ ಮತ್ತು ಮಾಜಿ ಮುಖ್ಯ ಸಚೇತಕ ಮತ್ತು ಶಾಸಕ ಸತೀಶ್ ರೆಡ್ಡಿ ಮತ್ತು ಕರ್ನಾಟಕ ಸಚಿವಾಲಯದ ನೌಕರರ ಸಂಘದ ರಮೇಶ್, ಜಿಎಸ್‌ಟಿ ಡೆಪ್ಯುಟಿ ಕಮಿಷರ್ ಮಹಮ್ಮದ್ ಪಾಷಾ, ದಿವ್ಯಾ ರಂಗೇನಹಳ್ಳಿ ಮತ್ತು ಹರೀಶ್ ರಾಮಯ್ಯ ಇದ್ದರು. ಈ ವೇಳೆ ಕಲಬುರಗಿಯ ಡಾ.ಜಗದೀಶ್ ಸಿರವಾರ ಅವರು ಆದಿಚುಂಚನಗಿರಿ ಸ್ವಾಮೀಜಿ ಅವರನ್ನು ಸನ್ಮಾನಿಸಿದರು.
ಬ್ರಿಟನ್ ಬಸವ ಸಮಿತಿಯ ಸಹಯೋಗದಲ್ಲಿ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಬ್ರಿಟನ್‌ನ 3 ಕನ್ನಡ ಕೌನ್ಸಿಲರ್‌ಗಳಾದ ರವಿ ವೆಂಕಟೇಶ್, ಸುರೇಶ್ ಗಟ್ಟಾಪುರ ಮತ್ತು ರಾಜೀವ್ ಮೆಟ್ರಿ ಇದ್ದರು. ಲ್ಯಾಂಬೆತ್‌ನ ಮಾಜಿ ಮೇಯರ್‌ಡಾ. ನೀರಜ್ ಪಾಟೀಲ್, ಬಸವ ಸಮಿತಿ ಪದಾಧಿಕಾರಿಗಳಾದ ಅಭಿ ಜೀತ್ ಸಾಲಿಮಠ, ಅಜಿತ್ ಮೆನನ್ ದಾಸ್, ರಂಗನಾಥ್ ಮಿರ್ಜಿ ಸ್ವಾಗತಿಸಿದರು.
ಲಂಡನ್ನಲ್ಲಿರುವ ಬಸವೇಶ್ವರ ಮೂರ್ತಿಗೆ ನಮನ ಸಲ್ಲಿಸಿದ:ನಿರ್ಮಲಾನಂದನಾಥ ಸ್ವಾಮಿಗಳು
RELATED ARTICLES