ಸಲ್ಮಾನ್ ಖಾನ್ ನಟನೆಯ ಸಿಕಂದರ್ ಚಿತ್ರ ತೋಪೆದ್ದಿದೆ. 200 ಕೋಟಿ ಬಜೆಟ್ನ ಚಿತ್ರ ಬಾಕ್ಸ್ ಆಫಿಸ್ನಲ್ಲಿ ಫೇಲ್ ಆಗಿದೆ. ಸಲ್ಮಾನ್ಗೆ ವಯಸ್ಸಾಯ್ತು ಅಂತ ಪ್ರೇಕ್ಷಕ ಥೀಯಟರ್ ಕಡೆ ಹೆಜ್ಜೆ ಇಡ್ತಾ ಇಲ್ಲ.
ಇನ್ನು ಸಿಕಂದರ್ ಚಿತ್ರ ತಂಡ ಗೆಲುವಿಗಾಗಿ ಹರಸಾಹಸವನ್ನೇ ಪಡ್ತಿದೆ. ಸಿಕಂದರ್ ಚಿತ್ರದ ಯಶಸ್ಸಿಗಾಗಿ ನಿರ್ದೇಶಕ, ಸೌತ್ ಕಲಾವಿದರ ಜೊತೆ ಕೈಜೋಡಿಸಿದ್ದಾರೆ. ಚಿತ್ರದಲ್ಲಿ ಕರ್ನಾಟಕ ಮೂಲದ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಹೀಗಾಗಿ ಚಿತ್ರದ ಯಶಸ್ಸಿನಲ್ಲಿದ್ದಾರೆ ಸಿಕಂದರ್ ಚಿತ್ರ ತಂಡ.
ಸಿಕಂದರ್ ಚಿತ್ರದಲ್ಲಿ ರಾಜಕೀಯ ವಿರುದ್ಧ ಹೋರಾಡುವಂತ ವ್ಯಕ್ತಿಯಾಗಿ ಸಲ್ಮಾನ್ ಖಾನ್ ನಟಿಸಿದ್ದಾರೆ. ಕನ್ನಡದ ನಟ ಕಿಶೋರ್ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ರಿಲೀಸ್ ಅಗಿದ್ದು. ಸಿನಿಪ್ರಿಯರಿಂದ ಭಾರಿ ರೆಸ್ಪಾನ್ಸ್ ಏನೂ ಬಂದಿಲ್ಲ.
ಈ ಚಿತ್ರದಲ್ಲಿ ತಮಗಿಂತ 31 ವರ್ಷ ಕಿರಿಯ ನಟಿ ರಶ್ಮಿಕಾ ಜೊತೆ ರೊಮ್ಯಾನ್ಸ್ ಮಾಡಿದಕ್ಕೆ ಸಲ್ಮಾನ್‌ರನ್ನು ಟೀಕಿಸಲಾಗಿತ್ತು. ಹಾಗಾಗಿ ಇತ್ತೀಚೆಗೆ ನಡೆದ ಸಿನಿಮಾ ಪ್ರಚಾರ ಕಾರ್ಯದ ವೇಳೆ ಸಲ್ಮಾನ್ ಮಾತನಾಡಿ, ಹೀರೋಯಿನ್ ಆಗಿ ನಟಿಸಲು ರಶ್ಮಿಕಾಗೆ ಯಾವುದೇ ಸಮಸ್ಯೆ ಇಲ್ಲ. ಅವರ ತಂದೆಗೂ ಕೂಡ ಯಾವುದೇ ಸಮಸ್ಯೆ ಇಲ್ಲ, ಹೀಗಿರುವಾಗ ನಿಮ್ಮದೇನು? ನಿಮಗ್ಯಾಕೆ? ಇದು ಸಮಸ್ಯೆಯಂತೆ ಕಾಣುತ್ತಿದೆ ಎಂದು ಖಡಕ್ ಆಗಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದರು.
ಈ ಹಿನ್ನಲೆ ಸಿಕಂದರ್ ಚಿತ್ರ ರಿಲೀಸ್ ಆದ ಬಳಿಕ ಥೀಯಟರ್ ಕಡೆಗೆ ಸಿನಿಪ್ರಿಯರು ಮುಖ ಮಾಡ್ತಿಲ್ಲ. ಆದ್ರಿಂದ ಸಿಕಂದರ್ ಸಿನಿಮಾ ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೇ ಅನ್ನೋದು ಕಾದು ನೋಡಬೇಕು.