ಆಂತರಿಕ ಕಲಹ, ಡಿನ್ನರ್ ರಾಜಕಾರಣ, ಆಪರೇಷನ್ ಹಸ್ತ ವಿಚಾರ ಇತ್ಯಾದಿಗಳ ಸದ್ದು ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಆಗುತ್ತಿದೆ. ಇದೇ ಹೊತ್ತಲ್ಲಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಇಂದು ಸೋಮವಾರ ರಾಜ್ಯ ರಾಜಧಾನಿಗೆ ಆಗಮಿಸುತ್ತಿದ್ದು, ಮೂರು ಸಭೆಗಳನ್ನು ನಡೆಸಲಿದ್ದಾರೆ. ಮೂಲಗಳ ಪ್ರಕಾರ, ಸುರ್ಜೆವಾಲ ಅವರು ಬೆಳಗಾವಿಯಲ್ಲಿ ಕಾಂಗ್ರೆಸ್ ಆಯೋಜಿಸಿರುವ ಜೈ ಬಾಪು, ಜೈ ಸಂವಿಧಾನ್ ಅಧಿವೇಶನಕ್ಕೆ ಪೂರ್ವಸಿದ್ಧತೆಗೆ ಈ ಸಭೆ ನಡೆಸಲಿದ್ದಾರೆ. ಇದೇ ಹೊತ್ತಲ್ಲಿ, ಕಾಂಗ್ರೆಸ್ನ ಆಂತರಿಕ ಕಲಹ ಸರಿಪಡಿಸುವ ಪ್ರಯತ್ನವನ್ನೂ ಅವರು ಮಾಡುವ ನಿರೀಕ್ಷೆ ಇದೆ. ಕೆಲಸ ಈ ಸಂದರ್ಭದಲ್ಲಿ ಆಗುವ ನಿರೀಕ್ಷೆ ಇದೆ.
ಡೆಲ್ಲಿ ಎಲೆಕ್ಷನ್ ಸಮರ ಸನ್ನದ್ಧ ಹೊತ್ತಲ್ಲೇ ಇತ್ತ ರಾಜ್ಯದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಈ ಕಾರಣಕ್ಕೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಬೆಂಗಳೂರಿಗೆ ಆಗಮಿಸಿ.. ಸಂಕ್ರಾಂತಿಗೆ ಒಂದು ದಿನ ಮೊದಲೇ ಕಾಂಗ್ರೆಸ್ ನಾಯಕರ ಜತೆಗೆ ಸರಣಿ ಸಭೆ ಕರೆದಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಜೊತೆ ಪ್ರತ್ಯೇಕ ಸಭೆ ನಡೆಸುವ ಸಂಭವವೂ ಇದೆ.