ದಕ್ಷಿಣ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2025ರಲ್ಲಿ ಸ್ಯಾಂಡಲ್ ವುಡ್ ಬಾದ್ ಶಾಹ ನಟನೆಯ ಮ್ಯಾಕ್ಸ್ ಸಿನಿಮಾಗೆ ಅತ್ಯುತ್ತಮ ನಟ ಅವಾರ್ಡ್ ದೊರೆತಿದೆ. ಉಪೇಂದ್ರ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ.
ನಿನ್ನೆ ರಾತ್ರಿ ದುಬೈಯಲ್ಲಿ ನೆರವೇರಿದ ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಿದ್ದು, 2024ರಲ್ಲಿ ಬಿಡುಗಡೆಯಾದ ಚಿತ್ರಗಳಿಗೆ ಪ್ರಶಸ್ತಿ ನೀಡಲಾಗಿದೆ.‘ಮ್ಯಾಕ್ಸ್’ ಸಿನಿಮಾದಲ್ಲಿ ಸುದೀಪ್ ಅವರು ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದರು.
ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಇನ್ನು, ಯುಐ ನಿರ್ದೇಶನಕ್ಕೆ ಉಪೇಂದ್ರ ಅವರು ಅತ್ಯುತ್ತಮ ನಿರ್ದೇಶಕ ಅವಾರ್ಡ್ ಪಡೆದಿದ್ದಾರೆ. ‘02’ ನಟನೆಗೆ ಆಶಿಕಾ ರಂಗನಾಥ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಭೀಮ ಸಿನಿಮಾ ನಟನೆಗೆ ದುನಿಯಾ ವಿಜಯ್ ಗೆ ಅತ್ಯುತ್ತಮ ನಟ ಅವಾರ್ಡ್ ದೊರೆತಿದೆ.ಕೃಷ್ಣಂ ಪ್ರಣಯ ಸಖಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗಳಿಸಿದೆ.