Top Newsಸಿನಿಮಾಸುದ್ದಿ

ದರ್ಶನ್ ನೋಡಲು ಜೈಲಿಗೆ ಆಗಮಿಸಿದ ಸಾಧುಕೋಕಿಲ

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್‌ರನ್ನು ನೋಡಲು ಈಗಾಗಲೇ ಸ್ಯಾಂಡಲ್‌ವುಡ್‌ ನಟರು ಜೈಲಿಗೆ ಭೇಟಿ ಕೊಟ್ಟಿದ್ದರು. ಈಗ ಸಾಧು ಕೋಕಿಲ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದಾರೆ. ಮೊದಲ ಬಾರಿಗೆ ದರ್ಶನ್ ಭೇಟಿಗೆ ವಕೀಲರ ಜೊತೆ ಸಾಧುಕೋಕಿಲ ಆಗಮಿಸಿದ್ದಾರೆ.

ನಿನ್ನೆ (ಜು.22) ದಿನಕರ್ ತೂಗುದೀಪ್ ಕುಟುಂಬದ ಜೊತೆ ವಿನೋದ್ ರಾಜ್ ಜೈಲಿಗೆ ಭೇಟಿ ನೀಡಿದ್ದರು. ಈ ಬೆನ್ನಲ್ಲೇ ಖ್ಯಾತ ಹಾಸ್ಯ ನಟ ಸಾಧು ಕೋಕಿಲ ಅವರು ದರ್ಶನ್ ನೋಡಲು ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಇನ್ನೂ ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಇರುತ್ತದೆ.

Comments (0)

Your email address will not be published. Required fields are marked *

Back to top button