#Exclusive NewsTop Newsಜಿಲ್ಲೆಸುದ್ದಿ

ಎಸ್.ನಿಜಲಿಂಗಪ್ಪರ ಶ್ವೇತ ಭವನ ಇನ್ನು ಮುಂದೆ ಮ್ಯೂಜಿಯಂ……!

 ಚಿತ್ರದುರ್ಗ  : ಕರ್ನಾಟಕ ಏಕೀಕರಣದ ರೂವಾರಿ, ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರ  ಚಿತ್ರದುರ್ಗದ ನಿವಾಸ ವಿನಯವನ್ನು ₹4.18 ಕೋಟಿಗೆ ಗುರುವಾರ ಸರ್ಕಾರ ಖರೀದಿಸಿದೆ. ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್‌ ಈ ಸಂಬಂಧದ ಕ್ರಯ ಪತ್ರವನ್ನು ತಹಸೀಲ್ದಾರ್‌ನಾಗವೇಣಿ ಅವರಿಗೆ ನೀಡುವುದರ ಮೂಲಕ ಮಾರಾಟ ಪ್ರಕ್ರಿಯೆಯ ಅಂತಿಮಗೊಳಿಸಿದರು. ಹೇಳಿಕೆ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ನಿಜಲಿಂಗಪ್ಪನವರ ಮನೆ ರಾಜ್ಯಪಾಲರ ಹೆಸರಿಗೆ ಖರೀದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ನಿಜಲಿಂಗಪ್ಪ ಅವರು ಬದುಕಿದ್ದಾಗಲೇ 28-3-1989 ರಂದು ತಮ್ಮ ಮೊಮ್ಮಗ ವಿನಯ್ ಹೆಸರಲ್ಲಿ ವಿಲ್‌ ಬರೆದಿದ್ದರು. ವಿಲ್ ಪ್ರಕಾರ ತನ್ನ ಮೂವರು ಮಕ್ಕಳು ಅನುಭವಿಸಿದ ನಂತರ ಮೊಮ್ಮಗ ವಿನಯ್ (ಕಿರಣ್ ಶಂಕರ್‌ಪುತ್ರ) ಗೆ ಮನೆ ಹೋಗಬೇಕೆಂಬುದನ್ನು ಉಲ್ಲೇಖಿಸಲಾಗಿತ್ತು. ನಿಜಲಿಂಗಪ್ಪರ ಎರಡನೇ ಮಗ ರಾಜಶೇಖರ್ ನಿದನರಾಗಿದು, ಮೂರನೇ ಮಗ ಉಮಾಕಾಂತ. ಹಿರಿಯ ಮಗ ಕಿರಣ್ ಶಂಕರ್‌ ಮನೆ ಮೇಲಿನ ತಮ್ಮ ಹಕ್ಕನ್ನು ಬಿಟ್ಟುಕೊಟ್ಟಿದ್ದಾರೆ. ಇದಾದ ತರುವಾಯ ವಿನಯ್ ಮನೆ ಮೇಲೆ ಸಂಪೂರ್ಣ ಹಕ್ಕನ್ನು ಪಡೆದುಕೊಂಡಿದ್ದರು. ನಿಜಲಿಂಗಪ್ಪ ಅವರು ಬಳಸುತ್ತಿದ್ದ ವಸ್ತುಗಳು ಮಂಚ ಕುರ್ಚಿ, ದೀವಾನ ಕಾಟ್ ಸೇರಿ ಹಲವು ವಸ್ತುಗಳನ್ನಿಟ್ಟು ಮ್ಯೂಜಿಯಂ ಮಾಡುವ ಉದೇಶ ಹೊಂದಲಾಗಿದೆ.

Comments (0)

Your email address will not be published. Required fields are marked *

Back to top button