ದೇಶ/ವಿದೇಶ

ರಷ್ಯಾ ಅಧ್ಯಕ್ಷ ಪುಟಿನ್ ಕಾರು ಅಪಘಾತ

ರಷ್ಯಾ ಅಧ್ಯಕ್ಷ ಪ್ಲಾಡಿಮಿರ್ ಪುಟಿನ್ ಅವರ ಅಧಿಕೃತ ಕಾರು ಎಂದು ನಂಬಲಾದ ಔರಸ್ ಸೆನಾಟ್ ಲಿಮೋಸಿನ್’ ಕಾರು ಮಾಸ್ಕೋದಲ್ಲಿ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ. ಈ ಘಟನೆ ಮಾರ್ಚ್ 29 ರಂದು ಮಾಸ್ಕೋದ ಲುಬಿಯಾಂಕಾದಲ್ಲಿರುವ ಎಫ್‌ಎಸ್‌ಬಿ ಗುಪ್ತಚರ ಸೇವಾ ಇಲಾಖೆ ಪ್ರಧಾನ ಕಚೇರಿಯ ಉತ್ತರಕ್ಕಿರುವ ರಸ್ತೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.ಕಾರು ಹೊತ್ತಿ ಉರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪುಟಿನ್ ಅವರನ್ನು ಹತ್ಯೆ ಮಾಡಲು ಈ ಕೃತ್ಯವೆಸಗಲಾಗಿದೆ ಎಂದು ಹೇಳಲಾಗುತ್ತಿದೆ. ಪುಟಿನ್ ಅವರು ಗಣ್ಯರಿಗೆ ಉಡುಗೊರೆ ನೀಡಲು ರಷ್ಯಾ ನಿರ್ಮಿತ ಕಾರುಗಳನ್ನೇ ಬಳಸುತ್ತಾರೆ.ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರಿಗೂ ಅಂತಹದೇ ಒಂದು ಕಾರನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.ರಷ್ಯಾ ಹಾಗೂ ಉಕ್ರೇನ್ ಸೇನೆಗಳು ಸಂಘರ್ಷ ನಡೆಸುತ್ತಿರುವ ಹೊತ್ತಿನಲ್ಲಿ,ನಡೆದಿರುವ ಈ ಘಟನೆಯು ಪುಟಿನ್ ಅವರ ಭದ್ರತೆಯ ಬಗ್ಗೆ ಕಳವಳವನ್ನುಂಟು ಮಾಡಿದೆ.ಆದರೆ, ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಹಾಗಾಗಿ, ಕಾರನ್ನು ಯಾರು ಬಳಸುತ್ತಿದ್ದರು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಕಾರಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದೂ ಸ್ಪಷ್ಟವಾಗಿಲ್ಲ..

Comments (0)

Your email address will not be published. Required fields are marked *

Back to top button