Wednesday, January 28, 2026
20.2 C
Bengaluru
Google search engine
LIVE
ಮನೆUncategorizedಬಿಬಿಎಂಪಿ ಆಸ್ತಿ ತೆರಿಗೆ ಬಾಕಿ: ರಾಕ್ ಲೈನ್ ಮಾಲ್ ಸೀಜ್!

ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ: ರಾಕ್ ಲೈನ್ ಮಾಲ್ ಸೀಜ್!

ಬೆಂಗಳೂರು : ಕನ್ನಡ ಸಿನಿ ಜಗತ್ತಿನ ಖ್ಯಾತ ನಿರ್ಮಾಪಕ ಕಂ ಬ್ಯುಸಿನೆಸ್ಮೆನ್, ನೂರಾರು ಕೋಟಿ ಆಸ್ತಿಯ ಒಡೆಯ ಕೂಡಾ ಹೌದು. ಕನ್ನಡ ಮಾತ್ರವಲ್ಲದೇ ಪರಬಾಷಾ ಚಿತ್ರಗಳಲ್ಲೂ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ ಅವರು. ಅದರೂ ಕೂಡಾ ಬಿಬಿಎಂಪಿ ಗೆ ಆಸ್ತಿ ತೆರಿಗೆ ಕಟ್ಟಲು ಹಣವಿಲ್ಲದಷ್ಟು ಬಡವರಾದರೇ ರಾಕ್‌ಲೈನ್ ವೆಂಕಟೇಶ್ ಎಂಬ ಪ್ರಶ್ನೆ ಕಾಡಿದೆ.

ರಾಕ್ ಲೈನ್ ಮಾಲ್ ನಿಂದ 2011 ರಿಂದ 2022-23 ರವರೆಗೆ ಬಾಕಿ ಉಳಿಸಿಕೊಂಡಿರುವ 11.51 ಕೋಟಿ ರೂ. ಆಸ್ತಿ ತೆರಿಗೆಯನ್ನು ಪಾಲಿಕೆಗೆ ಪಾವತಿಸಬೇಕಿದೆ. ಬಾಕಿ ತೆರಿಗೆ ಪಾವತಿಸಲು ಈಗಾಗಲೇ ಡಿಮಾಂಡ್ ನೋಟೀಸ್ ನೀಡಿದ್ದರು ತೆರಿಗೆಯನ್ನು ಪಾವತಿಸಿರಲಿಲ್ಲ. ಈ ಹಿನ್ನಲೆಯಲ್ಲಿ ದಾಸರಹಳ್ಳಿ ವಲಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ರಾಕ್ ಲೈನ್ ಮಾಲ್ ಅನ್ನು ಸೀಜ್ ಮಾಡಲಾಗಿದೆ.

ತೆರಿಗೆ ಕಟ್ಟಿ ಅಂತ ಹಲವಾರು ಬಾರಿ ಡಿಮಾಂಡ್ ನೋಟೀಸ್ ಜಾರಿ ಮಾಡಿದ್ದ ಪಾಲಿಕೆ. ಆದ್ರೂ ತೆರಿಗೆ ಕಟ್ಟೋಕ್ಕೆ ರಾಕ್ ಲೈನ್ ಮಾಲ್ ಕಳ್ಳಾಟವಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಇಂದು ಬಿಬಿಎಂಪಿ ಕಂದಾಯ ಇಲಾಖೆ ಅಧಿಕಾರಿಗಳಿಂದ ಮಾಲ್ ಸೀಜ್ ಮಾಡಲಾಗಿದೆ. ಆಸ್ತಿ ತೆರಿಗೆ ಕಟ್ಟುವರಿಗೆ ರಾಕ್ ಲೈನ್ ಮಾಲ್ ಓಪನ್ ಆಗೋದು ಡೌಟ್ ಎನ್ನಲಾಗಿದೆ. ಬಿಡುಗಡೆ ಕಮಿಷನರ್ ತುಷಾರ್ ಗಿರಿನಾಥ್ ಸೂಚನೆ ಮೇರೆಗೆ ರಾಕ್ ಲೈನ್ ಮಾಲ್ ಕ್ಲೋಸ್ ಮಾಡಿರುವ ಕಂದಾಯ ಇಲಾಖೆ ಅಧಿಕಾರಿಗಳು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments