ಸೆ.28 ರಂದು ಹೈದ್ರಾಬಾದ್ ನಲ್ಲಿ ನಡೆದ ಕಾಂತಾರ ಚಾಪ್ಟರ್-1 ಪ್ರೀ ರಿಲೀಸ್ ಇವೆಂಟ್ ನಲ್ಲಿ ನಟ ರಿಷಬ್ ಶೆಟ್ಟಿ ಕನ್ನಡದಲ್ಲೇ ಮಾತನಾಡಿರುವ ವಿಚಾರಕ್ಕೆ ಆಂಧ್ರ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.. ಹೈದ್ರಾಬಾದ್‌ನಲ್ಲಿ ಕನ್ನಡ ಮಾತಾಡಿದ್ದಕ್ಕೆ ರಿಷಬ್ ಸ್ಪಷ್ಟನೆ ಕೊಟ್ಟಿದ್ಧಾರೆ. ಮುಂಬೈನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ರಿಷಬ್ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ.
ಮುಂಬೈನಲ್ಲಿ ಹಿಂದಿ ಭಾಷೆ ಮಾತನಾಡುವ ರಿಷಬ್ ಹೈದ್ರಾಬಾದ್‌ನಲ್ಲಿ ತೆಲುಗು ಮಾತನಾಡಿಲ್ಲವೆಂದು ವಿರೋಧ ಬಂದ ಹಿನ್ನೆಲೆ ಸ್ಪಷ್ಟನೆ ಕೊಟ್ಟಿದ್ದಾರೆ. ನನ್ನ ಭಾಷೆ ಕನ್ನಡ , ನಾನು ಹೆಮ್ಮೆಯ ಕನ್ನಡಿಗ, ನಾನು ಕನ್ನಡದಲ್ಲೇ ಯೋಚಿಸುವುದು ಹೀಗಾಗಿ ಕನ್ನಡ ಮಾತಾಡ್ತೀನಿ, ಮಾತನಾಡಲು ಬರದೇ ಇರೋ ಭಾಷೆಯನ್ನ ಮಾತನಾಡಿ ಆ ಭಾಷೆಗೆ ಅಗೌರವ ತೋರಿಸುವುದು ಬೇಡವೆಂದು ಕನ್ನಡದಲ್ಲಿ ಮಾತನಾಡಿದ್ದೇನೆ ಎಂದಿದ್ದಾರೆ ರಿಷಬ್. ಜೊತೆಗೆ ಎಲ್ಲ ಭಾಷೆಯನ್ನೂ ಕಲಿಯೋದಕ್ಕೆ ಖುಷಿ ಇದೆ. ಇತ್ತೀಚಿಗೆ ಬೇರೆ ಬೇರೆ ಭಾಷೆಯಲ್ಲಿ ಸಂದರ್ಶನ ಕೊಡುತ್ತಾ ಬಂದಿರೋದ್ರಿಂದ ಎಲ್ಲಾ ಭಾಷೆಯನ್ನ ಈಗೀಗ ಕಲಿಯುತ್ತಿದ್ದೇನೆ. ಎಂದು ಮುಂಬೈನಲ್ಲಿ ಹೇಳುವ ಮೂಲಕ ತೆಲುಗು ಭಾಷೆ ಮಾತನಾಡದಿರುವ ವಿವಾದಕ್ಕೆ ರಿಷಬ್ ಸ್ಪಷ್ಟನೆ ಕೊಟ್ಟಿದ್ದಾರೆ.


