Top Newsಸಿನಿಮಾಸುದ್ದಿ

ರಿಷಬ್​​ ಶೆಟ್ಟಿ ನಟನೆಯ ಕಾಂತಾರ ಚಾಪ್ಟರ್- 1 ಟ್ರೇಲರ್ ಬಿಡುಗಡೆ

ಬೆಂಗಳೂರು: ಕನ್ನಡ ಬಹುನಿರೀಕ್ಷಿತ, ಪ್ಯಾನ್​ ಇಂಡಿಯಾದ ದೊಡ್ಡ ಸಿನಿಮಾಗಳಲ್ಲಿ ಒಂದಾಗಿರುವ ಕಾಂತಾರ ಚಾಪ್ಟರ್​-1 ಸಿನಿಮಾ ಟ್ರೈಲರ್​ ಬಿಡುಗಡೆಯಾಗಿದೆ.. ನಟ ರಿಷಬ್​ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ಕಾಂತಾರ ಚಾಪ್ಟರ್​​​​​​​-1 ಚಿತ್ರದ ಟ್ರೈಲರ್​ ಅನ್ನು ಸ್ಯಾಂಡಲ್​ ವುಡ್​​ನಲ್ಲಿ ಜನರೇ ರಿಲೀಸ್​ ಮಾಡಿದ್ದಾರೆ.. ಟಾಲಿವುಡ್​, ಮಾಲಿವುಡ್​, ಹಾಗೂ ಬಾಲಿವುಡ್ ನಲ್ಲಿ ಈಗಾಗಲೇ ಅನೌನ್ಸ್​​ ಮಾಡಿರುವಂತೆ ಸ್ಟಾರ್​​ ನಟರು ಟ್ರೈಲರ್ ರಿಲೀಸ್​ ಮಾಡಿದ್ಧಾರೆ. ​​​​​​​​​​

ಅಧರ್ಮ ನಡೆಯುವ ಊರಿನಲ್ಲಿ ಧರ್ಮವನ್ನು ಕಾಪಾಡುವವನ ಅವತಾರದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ‘ಕಾಂತಾರ’ದ ಮಣ್ಣಿನಲ್ಲಿ ರಿಷಬ್ ರಕ್ಷಕನಾಗಿ, ವೀರ ಯೋಧನಂತೆ ಕಾಣಿಸಿಕೊಂಡಿದ್ದಾರೆ. ಒಂದು ಕಾಡು ಜನರ ನಂಬಿಕೆ ಮತ್ತು ಇನ್ನೊಂದು ಕಡೆ ‘ಕಾಂತಾರ’ದ ವಶಕ್ಕೆ ನಡೆಯುವ ಯುದ್ಧವನ್ನು ತೋರಿಸಲಾಗಿದೆ.

ಚಿತ್ರದಲ್ಲಿ ರುಕ್ಮಿಣಿ ವಸಂತ್ ಯುವರಾಣಿ ಕನಕಾವತಿಯಾಗಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಗಮನ ಸೆಳೆದಿದ್ದಾರೆ. ಬಹುಭಾಷಾ ನಟ ಜಯರಾಮ್ ಅವರ ಪಾತ್ರ ಗಮನ ಸೆಳೆದಿದೆ.

ಕಾಂತಾರ ಚಾಪ್ಟರ್ -1 ಹೊಂಬಾಳೆ ಫಿಲ್ಡ್‌ನ ಅತ್ಯಂತ ದುಬಾರಿ ಸಿನಿಮಾವೆನ್ನಲಾಗಿದೆ. 2022ರ ಕಾಂತಾರಕ್ಕೆ 16 ಕೋಟಿ ಬಂಡವಾಳ ಹಾಕಲಾಗಿತ್ತು. ಈ ಚಿತ್ರದ ಬಜೆಟ್ 100 ಕೋಟಿಗಿಂಯ ಹೆಚ್ಚಿದೆ ಎನ್ನಲಾಗುತ್ತಿದೆ.

ಕಾಂತಾರ -1 ಚಿತ್ರದ ಡಿಜಿಟಲ್ ರೈಟ್ಸ್ 125 ಕೋಟಿ ರೂ.ಗೆ ಅಮೇಜಾನ್ ಪ್ರೈಮ್‌ ಗೆ ಮಾರಾಟವಾಗಿದೆ ಎನ್ನಲಾಗಿದೆ. ಅಕ್ಟೋಬರ್ 2 ರಂದು 7 ಭಾಷೆಗಳಲ್ಲಿ 30 ದೇಶಗಳಲ್ಲಿ ಚಿತ್ರದ ಅದ್ಧೂರಿಯಾಗಿ ರಿಲೀಸ್ ಆಗಲಿದೆ.

Comments (0)

Your email address will not be published. Required fields are marked *

Back to top button