ಬೆಂಗಳೂರು : ತೆಲುಗಿನಲ್ಲಿ ‘ಹನುಮಾನ್’ ಸಿನಿಮಾ ಘೋಷಣೆ ಬೆನ್ನಲ್ಲೇ ನಟ ರಿಷಬ್ ಶೆಟ್ಟಿ ಅವರ ‘ದಿ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ ಘೋಷಣೆಯಾಗಿದೆ.
ಈ ಚಿತ್ರ ಸಂದೀಪ್ ಸಿಂಗ್ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. 2027ರ ಜನವರಿ 21ರಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಸಂದೀಪ್ ಸಿಂಗ್ ಅವರು 2024ರ ಫೆಬ್ರುವರಿ 16ರಂದು ಈ ಸಿನಿಮಾವನ್ನು ಘೋಷಿಸಿದ್ದರು. ಹಿಂದಿ, ಮರಾಠಿ, ಕನ್ನಡ, ತಮಿಳು ಸೇರಿ ಆರು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ಕಾಂತಾರ ಪ್ರೀಕ್ವಲ್ ಭಾಗದ ನಿರ್ದೇಶನ ಹಾಗೂ ನಟನೆಯನ್ನು ಪೂರ್ಣ ಮಾಡಿರುವ ರಿಷಬ್ ಶೆಟ್ಟಿ, ಶೂಟಿಂಗ್ ನಂತರದ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. 2025ರ ಅಕ್ಟೋಬರ್ 2 ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಇದರ ಬೆನ್ನಲ್ಲಿಯೇ ರಿಷಬ್ ಹೊಸ ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಛತ್ರಪತಿ ಶಿವಾಜಿ ಬಯೋಪಿಕ್‌ನ ಮೂಲಕ ಅವರು ಬಾಲಿವುಡ್‌ಗೆ ಲಗ್ಗೆ ಇಡುತ್ತಿದ್ದಾರೆ.
ಸಿನಿಮಾದ ಪೋಸ್ಟರ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲಿಯೇ ಕನ್ನಡದ ಸಿನಿ ಪ್ರೇಕ್ಷಕರಿಂದ ಪರ ವಿರೋಧದ ಚರ್ಚೆಗಳು ಆರಂಭವಾಗಿದೆ. ಶಿವಾಜಿ ಮಹಾರಾಜರೊಂದಿಗೆ ನೀವು ಕನ್ನಡದ ಇಮ್ಮಡಿ ಪುಲುಕೇಶಿ ಚಿತ್ರವನ್ನೂ ಮಾಡಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ದಯವಿಟ್ಟು ಮೊದಲು ಇತಿಹಾಸ ಓದಿ 1674 ರಿಂದ 1680ರವರೆಗೆ ಆಳಿದ ಶಿವಾಜಿ ಅವರು ಅದು ಹೇಗೆ ಹಿಂದೂ ಸಾಮ್ರಾಜ್ಯ ಉಳಿವಿಗೆ ಕಾರಣರಾದರು ಅಂತ ದಯವಿಟ್ಟು ಯಾರಾದ್ರೂ ಸ್ಪಲ್ಪ ತಿಳಿಸಿ’ ಎಂದು ರಿಷಬ್ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
BIG ANNOUNCEMENT!@shetty_rishab brings to life the epic saga of India’s greatest warrior king!
Get ready for #ChhatrapatiShivajiMaharaj #ThePrideOfBharat
A film by @thisissandeeps
Global Release: 21st January 2027
हर हर महादेव #ChhatrapatiShivajiMaharaj #ThePrideOfBharat… pic.twitter.com/ckinw0qzDG— A Sharadhaa (@sharadasrinidhi) December 3, 2024
‘ಶೆಟ್ರೆ ನೀವು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನೀವ್ ಒಬ್ಬರೇ ನೋಡಿ ಹಿಂದೂ ಧರ್ಮದ ಬಗ್ಗೆ ಒಳ್ಳೆ ಒಳ್ಳೆ ಚಿತ್ರವನ್ನು ಕೊಡುತ್ತಿದ್ದೀರಾ ದೇವರು ನಿಮಗೆ ಆಯಸ್ಸು ಆರೋಗ್ಯ ತುಂಬಾ ಹೆಚ್ಚಿಸಲಿ form (ಉತ್ತರ ಕರ್ನಾಟಕದ ಬಿಜಾಪುರ ಹುಡುಗ) ಜೈ ಶ್ರೀ ರಾಮ್’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಅವತ್ತು ಇಮ್ಮಡಿ ಪುಲಿಕೇಶಿ ಮಹಾರಾಜರು ಇರಲಿಲ್ಲ ಅಂದ್ರೆ ಇವತ್ತು ಇವರನ್ನ ಈ ರೀತಿಯಲ್ಲಿ ನೋಡ್ತಾ ಇದ್ವಾ ಯೋಚನೆ ಮಾಡಿ’ ಎಂದು ಸಿನಿಮಾ ಬಗ್ಗೆ ಟೀಕೆ ಮಾಡಿದ್ದಾರೆ.


