Tuesday, September 9, 2025
28.4 C
Bengaluru
Google search engine
LIVE
ಮನೆ#Exclusive NewsTop Newsನಿವೃತ್ತ ಪ್ರೊಫೆಸರ್ ನಿಧನ; ಎಸ್‌ಡಿಎಂ ಆಸ್ಪತ್ರೆ ದೇಹದಾನ ಮಾಡಿದ ಕುಟುಂಬಸ್ಥರು

ನಿವೃತ್ತ ಪ್ರೊಫೆಸರ್ ನಿಧನ; ಎಸ್‌ಡಿಎಂ ಆಸ್ಪತ್ರೆ ದೇಹದಾನ ಮಾಡಿದ ಕುಟುಂಬಸ್ಥರು

ಧಾರವಾಡ: ನಿಧನರಾದ ನಿವೃತ್ತ ಪ್ರೊಫೆಸರ್​ ಒಬ್ಬರ ಶರೀರವನ್ನು ಅವರ ಕುಟುಂಬಸ್ಥರು ಧಾರವಾಡ ಎಸ್‌ಡಿಎಂ ಆಸ್ಪತ್ರೆಗೆ ದಾನ ಮಾಡುವ ಮೂಲಕ ತಮ್ಮ ನೋವಿನಲ್ಲೂ ಮಾದರಿಯ ಕಾರ್ಯ ಮಾಡಿದ್ದಾರೆ.

ಧಾರವಾಡದ ವಿಶ್ವಭಾರತಿ ಕಾಲೋನಿಯ ನಿವಾಸಿಯಾಗಿದ್ದ ನಿವೃತ್ತ ಪ್ರೊಫೆಸರ್​ ಮಲ್ಲಿಕಾರ್ಜುನ ಯಡಳ್ಳಿ ನಿಧನರಾಗಿದ್ರು. ಈ ಮೊದಲೇ ಎಸ್‌ಡಿಎಂ ಆಸ್ಪತ್ರೆಗೆ ಅವರು ತಮ್ಮ ಶರೀರ ದಾನ ಮಾಡುವದಾಗಿ ಬರೆದು ಕೊಟ್ಟಿದ್ದರು. ಮಲ್ಲಿಕಾರ್ಜುನ ಅವರ ಆಶಯದಂತೆ ಅವರ ಕುಟುಂಬದವರು ಎಸ್‌ಡಿಎಂ ಆಸ್ಪತ್ರೆಗೆ ದಾನ ಮಾಡಿದ್ರು.

ಮೃತ ನಿವೃತ್ತ ಪ್ರೊಫೆಸರ್ ಈ ಹಿಂದೆ ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಎಲ್.ಕೆ.ಖೋತ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಪೆಸರ್ ಆಗಿ ಅದೇ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments