ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸರ್ಕಾರ ಇಂದುಬಿಡುಗಡೆ ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ಘೋಷಣೆ ಮಾಡಿದರು. ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಒಟ್ಟು 68 ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿದೆ. ಇದರ ಜೊತೆ ವಿವಿಧ ಸಾಧನೆ ಮಾಡಿದ 50 ಪುರಷರ ಹಾಗೂ 59 ಜನ ಮಹಿಳಾ ಸಾಧಕರಿಗೆ ಪ್ರಶಸ್ತಿಯನ್ನು ಸಹ ಘೋಷಣೆ ಮಾಡಲಾಗಿದೆ.
ಈ ಬಾರಿ 100 ವಿಶೇಷ ಪ್ರಶಸ್ತಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ” ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಪ್ರತಿಯೊಂದು ಜಿಲ್ಲೆಗೂ ಪ್ರಾತಿನಿದ್ಯ ನೀಡಲಾಗಿದೆ ಹಾಗೂ ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಳ್ಳಲಾಗಿದೆ. ಈ ವರ್ಷ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ವರ್ಷ ಆಗಿರುವುದರಿಂದ ಇದನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಸುವರ್ಣ ಸಂಭ್ರಮ -50 ರ ಸುವರ್ಣ ಮಹೋತ್ಸವ ಎಂಬ ವಿಶೇಷ ಪ್ರಶಸ್ತಿಯನ್ನು 50 ಸಾಧಕ ಮಹಿಳೆಯರಿಗೆ ಮತ್ತು 50 ಪುರುಷರಿಗೆ ನೀಡಲಾಗುತ್ತಿದೆ. ಇದರಿಂದ 69 + 100 ಒಟ್ಟು 169 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ” ಎಂದು ತಿಳಿಸಿದರು.
ಅರ್ಜಿಯನ್ನು ಹಾಕದ ಎಲೆಮರೆಯ ಕಾಯಿಯಂತೆ, ಸೇವೆ ಸಲ್ಲಿಸಿರುವ 20ಕ್ಕೂ ಹೆಚ್ಚು ಮಂದಿಯನ್ನು ಸಹ ಗುರುತಿಸಿ, ಪ್ರಶಸ್ತಿ ನೀಡಲಾಗುತ್ತಿದೆ. ಬಯಲಾಟ ಕ್ಷೇತ್ರದಲ್ಲಿ 92 ವರ್ಷದ ನಾರಾಯಣಪ್ಪ ಶಿಳ್ಳೇಕ್ಯಾತ, ವಿಜಯನಗರ ಜಿಲ್ಲೆ ಇವರ ಹೆಸರನ್ನು ಸಹ ಪರಿಗಣಿಸಲಾಗಿದೆ. ಜಾನಪದ ಕ್ಷೇತ್ರದಲ್ಲಿ ಅಂದ ಕಲಾವಿದರಾದ ನರಸಿಂಹಲು, ಬೀದರ್ ಜಿಲ್ಲೆ ಇವರನ್ನು ಸಹ ಪರಿಗಣಿಸಲಾಗಿದೆ. 13 ಮಹಿಳೆಯರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಜಾನಪದ
- ಇಮಾಮಸಾಬ ಎಮ್ ವಲ್ಲೆಪನವರ
- ಅಶ್ವ ರಾಮಣ್ಣ
- ಕುಮಾರಯ್ಯ
- ವೀರಭದ್ರಯ್ಯ
- ನರಸಿಂಹಲು (ಅಂಧ ಕಲಾವಿದ)
- ಬಸವರಾಜ ಸಂಗಪ್ಪ ಹಾರಿವಾಳ
- ಮತಿ ಎಸ್ ಜಿ ಲಕ್ಷ್ಮೀದೇವಮ್ಮ
- ಪಿಚ್ಚಳ್ಳಿ ನಿವಾಸ
- ಲೋಕಯ್ಯ ಶೇರ (ಭೂತಾರಾಧನೆ)
ಶಿಲ್ಪಕಲೆ
- ಅರುಣ್ ಯೋಗಿರಾಜ್
- ಬಸವರಾಜ್ ಬಡಿಗೇರ್
ಕ್ಷೇತ್ರ – ಚಲನಚಿತ್ರ /ಕಿರುತೆರೆ
ಹೇಮಾ ಚೌದರಿ
ಎಂ. ಎಸ್. ನರಸಿಂಹಮೂರ್ತಿ
ಪಿ ರಾಜಗೋಪಾಲ
ಎ.ಎನ್ ಸದಾಶಿವಪ್ಪ
ವಿದುಷಿ ಲಲಿತಾ ರಾವ್
ಎಸ್. ವಿ. ರಂಗನಾಥ್ ಭಾ.ಆ.ಸೇ (ನಿ)
ಕ್ಷೇತ್ರ-ವೈದ್ಯಕೀಯ
ಡಾ. ಜಿ.ಬಿ. ಬಿಡಿನಹಾಳ
ಡಾ. ಮೈಸೂರು ಸತ್ಯನಾರಾಯಣ
ಡಾ ಲಕ್ಷ್ಮಣ್ ಹನುಮಪ್ಪ ಬಿದರಿ
ಕ್ಷೇತ್ರ- ಸಮಾಜಸೇವೆ
ವೀರಸಂಗಯ್ಯ
ಹೀರಾಚಂದ್ ವಾಗ್ಮಾರೆ
ಮತಿ ಮಲ್ಲಮ್ಮ ಸೂಲಗಿತ್ತಿ
ದಿಲೀಪ್ ಕುಮಾರ್
ಹುಲಿಕಲ್ ನಟರಾಜ
ಡಾ. ಹೆಚ್.ಆರ್. ಸ್ವಾಮಿ
ಆ.ನ ಪ್ರಹ್ಲಾದ ರಾವ್
ಕೆ. ಅಜೀತ್ ಕುಮಾರ್ ರೈ
ಇರ್ಫಾನ್ ರಜಾಕ್ (ವಾಸ್ತುಶಿಲ್ಪ)
ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ
ಕ್ಷೇತ್ರ- ಹೊರದೇಶ-ಹೊರನಾಡು
ಕನ್ಹಯ್ಯ ನಾಯ್ಡು
ಡಾ. ತುಂಬೆ ಮೊಹಿಯುದ್ದೀನ್
ಚಂದ್ರಶೇಖರ ನಾಯಕ್
2000 ಕ್ಕೂ ಅಧಿಕ ಅರ್ಜಿ ಸಲ್ಲಿಕೆ
ರಾಜ್ಯೋತ್ಸವ ಪ್ರಶಸ್ತಿಗೆ ಸೇವಾಸಿಂಧು ಪೋರ್ಟಲ್ ಮೂಲಕ ಇದುವರೆಗೂ 1500 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, 100 ಕ್ಕೂ ಹೆಚ್ಚು ಅರ್ಜಿಗಳು ಭೌತಿಕವಾಗಿ ಸಲ್ಲಿಕೆಯಾಗಿದೆ. ರಾಜ್ಯೋತ್ಸವ ಪ್ರಶಸ್ತಿಗಾಗಿ ವಿವಿಧ ಕ್ಷೇತ್ರಗಳ ಗಣ್ಯರು, ಸಾಧಕರು, ಸಂಘ-ಸಂಸ್ಥೆಗಳು ಅರ್ಜಿ ಸಲ್ಲಿಸಿವೆ. ಒಟ್ಟಾರೆ ಬಂದ ಎಲ್ಲ ಅರ್ಜಿಗಳನ್ನು ಗಣನೆಗೆ ತೆಗೆದುಕೊಂಡು ರಾಜ್ಯೋತ್ಸವ ಪ್ರಶಸ್ತಿ ಸಮಿತಿ ಪ್ರಶಸ್ತಿ ವಿಜೇತರ ಪಟ್ಟಿ ಸಿದ್ಧಪಡೆಸಲಾಗಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ರಾಜ್ಯಸರ್ಕಾರ ಸಮಿತಿ ರಚನೆ ಮಾಡಿದ ಬೆನ್ನಲ್ಲೆ ಪ್ರಶಸ್ತಿಗಾಗಿ ಸುಮಾರು 2 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು.