ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಂ ಸೀನ್ ಫಿಂಗರ್ ಪ್ರಿಂಟ್ ಜೊತೆ ಹತ್ತಕ್ಕೂ ಹೆಚ್ಚು ಆರೋಪಿಗಳ ಫಿಂಗರ್ ಪ್ರಿಂಟ್ (Finger Print) ಹೋಲಿಕೆಯಾಗಿರುವ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿ ಹತ್ತು ಜನರ ಫಿಂಗರ್ ಪ್ರಿಂಟ್ ಹೋಲಿಕೆಯಾಗಿದೆ.
ಕ್ರೈಂ ಸೀನ್, ಶವ ಬಿಸಾಕಿದ ಜಾಗ, ಶವ ಸಾಗಾಟ ಮಾಡಿದ ವಾಹನ, ಶವ ಇಟ್ಟಿದ್ದ ಸೆಕ್ಯೂರಿಟಿ ಗಾರ್ಡ್ ಕೊಠಡಿ, ಮೃತನ ಬಟ್ಟೆಗಳು, ಹಲ್ಲೆ ಮಾಡಲು ಬಳಸಿದ ವಸ್ತುಗಳು, ಸಾಗಾಟ ಮಾಡಿದ ಕಾರ್, ಆರೋಪಿಗಳ ಬಟ್ಟೆಗಳ ಮೇಲಿನ ಫಿಂಗರ್ ಪ್ರಿಂಟ್ ಸಂಗ್ರಹ ಮಾಡಲಾಗಿತ್ತು.
ಎಫ್‌ಎಸ್‌ಎಲ್ ತಜ್ಞರನ್ನ ಬಳಸಿ ಫಿಂಗರ್ ಪ್ರಿಂಟ್ ಸಂಗ್ರಹಿಸಲಾಗಿತ್ತು. ಆರೋಪಿಗಳ ಬಂಧನದ ಬಳಿಕ ಎಲ್ಲರ ಫಿಂಗರ್ ಪ್ರಿಂಟ್ ಪಡೆದು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿತ್ತು.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com