Freedom TV

ನೆನಪಿರಲಿ- ರಾಮ ಬೀದಿಗೆ ತಂದು ಈಗ ಓಡಿಹೋಗಿ ಅಯೋಧ್ಯೆಯಲ್ಲಿ ಬೀಗ ಹಾಕಿಕೊಂಡಿದ್ದಾರೆ – ಮಧು ಬಂಗಾರಪ್ಪ

ಶಿವಮೊಗ್ಗ :  ಬಂಗಾರಪ್ಪನವರು ಬಿಜೆಪಿಯಿಂದ ಗೆದ್ದಿದ್ದರು ಅಂತ ರಾಘವೇಂದ್ರ ಹೇಳಿದ್ದಾರೆ. ಬಂಗಾರಪ್ಪ ನವರಿಂದ ರಾಜ್ಯದಲ್ಲಿ ಬಿಜೆಪಿ ಬದುಕಿದ್ದು. ಬಿಜೆಪಿಗೆ ರಾಜ್ಯದಲ್ಲಿ ಶಕ್ತಿ ಕೊಟ್ಟಿದ್ದು ಬಂಗಾರಪ್ಪ. ಸೋಲನ್ನ ಕೀಳು ಮಟ್ಟದಲ್ಲಿ ಮಾತನಾಡಬೇಡಿ, ಸೋಲಿನ ರುಚಿಯನ್ನು ನಾವು ಈ ಬಾರಿ ತೋರಿಸುತ್ತೇವೆ ಎಂದು ಮಧು ಬಂಗಾರಪ್ಪ ಆಕ್ರೋಶ ಹೊರಹಾಕಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಗೆಲುವುಗೆ ಇದೇ ಮಧು ಬಂಗಾರಪ್ಪ ಕಾರಣ ನೆನಪಿರಲಿ. ಮಧು ಬಂಗಾರಪ್ಪ ನೀನು ನನಗೆ ಸಹಾಯ ಮಾಡಬೇಕು ಎಂದು ಕೈ ಹಿಡಿದು ಕೇಳಿದ್ದರು. ಏನ್ ಯೋಗ್ಯತೆ ಇದೆ ನಿಮಗೆ ಬಂಗಾರಪ್ಪ ಹೆಸರು ಹೇಳಲು, ಯಡಿಯೂರಪ್ಪ, ಈಶ್ವರಪ್ಪಗೆ ಪುನರ್ಜನ್ಮ ನೀಡಿದ್ದು ಬಂಗಾರಪ್ಪ ಎಂದರು.

ನಿಮ್ಮ ತೋಟಕ್ಕೆ ಪುಕ್ಸಟ್ಟೆ ವಿದ್ಯುತ್ ಬರುತ್ತಿರೋದು ಬಂಗಾರಪ್ಪ ನವರಿಂದ, ನಮ್ಮ ಋಣದಲ್ಲಿ ಯಡಿಯೂರಪ್ಪ ಕುಟುಂಬ ಇದೆ. ನಿಮ್ಮ ಋಣದಲ್ಲಿ ನಾವಿಲ್ಲ ನೆನಪಿರಲಿ ನೀವು ಇಷ್ಟು ದಿನ ಹೇಗೆ ಗೆದ್ದಿದ್ದೀರಾ ಅಂತ ಗೊತ್ತಿದೆ ನಿಮ್ಮ ಸ್ವಾರ್ಥ ರಾಜಕಾರಣಕ್ಕೆ ಜಿಲ್ಲಾಸ್ಪತ್ರೆ ಶಿಕಾರಿಪುರಕ್ಕೆ ಹಾಕಿಸಿಕೊಂಡರು ಎಂದರು.

ರಾಮ ಬೀದಿಗೆ ತಂದು ಈಗ ಓಡಿಹೋಗಿ ಅಯೋಧ್ಯೆಯಲ್ಲಿ ಬೀಗ ಹಾಕಿಕೊಂಡಿದ್ದಾರೆ. ಈಶ್ವರಪ್ಪನವರಿಗೆ ಉತ್ತರ ಕೊಡಿ ರಾಘವೇಂದ್ರ, ಪಕ್ಷ ಕಟ್ಟಿದವರನ್ನು ಸ್ವಾರ್ಥಕ್ಕಾಗಿ ತುಳಿಯುತ್ತಿದ್ದೀರಾ, ಗೀತಾ ಶಿವರಾಜ್ ಕುಮಾರ್ ನಿಮ್ಮನ್ನ ಸೋಲಿಸುತ್ತಾರೆ ಎಂದರು.

 

Comments (0)

Your email address will not be published. Required fields are marked *

Back to top button