ಕೊಪ್ಪಳ: ಟಿ ಬಿ ಡ್ಯಾಂ 19 ನೇ ಕ್ರಸ್ಟ್ ಗೇಟ್ ಕಿತ್ತುಹೋಗಿದ್ದು, ಇದನ್ನು ವಿರೋಧ ಪಕ್ಷದವರು ರಾಜಕೀಯ ಮಾಡಲು ಆರಂಭಿಸಿದ್ರು ಅವರ ಟೀಕೆಗಳು ಸತ್ತು ಹೋಗುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೇ ಎಂದು ಬಸಾಪೂರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಬಿ ಡ್ಯಾಂ 19 ಗೇಟ್ ದುರಸ್ಥಿಗೆ ಇಂಜಿನಿಯರ್ಗಳು ಹಗಲು-ರಾತ್ರಿ ಕೆಲಸ ಮಾಡಿ, ಕೇವಲ ನಾಲ್ಕು ದಿನದಲ್ಲಿ ಕೆಲಸ ಮುಗಿಸಿದರು. ದೇವರ ಆಶೀರ್ವಾದ, ಜನರ ಆಶೀರ್ವಾದದಿಂದ ಮಳೆ ಬರುತ್ತಿದ್ದು, ಡ್ಯಾಂಗೆ ನೀರು ಹರಿದು ಬರ್ತಾಯಿದೆ. ಡ್ಯಾಂ ದುರಸ್ಥಿಗೆ ಸಹಾಯ, ಸಹಕಾರ ಮಾಡಿದವರಿಗೆ ಗೌರವ ಸಲ್ಲಿಸುತ್ತೇವೆ ಎಂದರು.