ಸೋಷಿಯಲ್ ಮಿಡಿಯಾಗಳಲ್ಲಿ ಪಾಪುಲಾರಿಟಿ ಗಳಿಸಲು ಕೆಲವರು ವಿಭಿನ್ನವಾಗಿ ಕಂಟೆಂಟ್ ಕ್ರಿಯೇಟ್ ಮಾಡಲು ಪ್ರಯತ್ನಿಸ್ತಿರುತ್ತಾರೆ. ಕೆಲವರು ರಸ್ತೆ, ಮೆಟ್ರೋ ಸ್ಟೇಷನ್, ಪಾರ್ಕ್, ಮಾಲ್.. ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್ ಮಾಡುತ್ತಾ ನಾನಾ ಸಮಸ್ಯೆಗಳಿಗೆ ಸಿಲುಕಿಕೊಳ್ತಿದ್ದಾರೆ. ಅಂಥವರ ಸಾಲಿಗೆ ಇದೀಗ ಮತ್ತೊಬ್ಬರು ಸೇರ್ಪಡೆ ಆಗಿದ್ದಾರೆ.
ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ರಸ್ತೆ ಮೇಲೆ ರೀಲ್ಸ್ ಮಾಡ್ತಿದ್ದ ಸುಷ್ಮಾ ಎಂಬ ಮಹಿಳೆ ಸರಗಳ್ಳತನಕ್ಕೆ ತುತ್ತಾಗಿದ್ದಾರೆ. ಮಹಿಳೆ ರೀಲ್ಸ್ ಮಾಡುವ ಸಂದರ್ಭದಲ್ಲಿಯೇ ಬೈಕಲ್ಲಿ ಬಂದ ಸರಗಳ್ಳನೊಬ್ಬ ಬಂದಷ್ಟೇ ವೇಗದಲ್ಲಿ ಆಕೆಯ ಕೊರಳಲ್ಲಿದ್ದ ಬಂಗಾರದ ಚೈನ್ ಕಿತ್ಕೊಂಡು ಎಸ್ಕೇಪ್ ಆಗಿದ್ದಾರೆ.
ಸರಗಳ್ಳತನ ಇಂಚಿಂಚು ದೃಶ್ಯಗಳು ಈಗ ವೈರಲ್ ಆಗಿದೆ. ನೆಟ್ಟಿಗರೆಲ್ಲಾ ಸಖತ್ ಕಾಮೆಂಟ್ ಮಾಡತೊಡಗಿದ್ದಾರೆ. ರೀಲ್ಸ್ ಮಾಡುವ ಭರದಲ್ಲಿ ಮೈಮರೆತ್ರೇ ಹೀಗೆ ಆಗೋದು ಎಂದೆಲ್ಲಾ ಕಾಮೆಂಟಿಸತೊಡಗಿದ್ದಾರೆ.
ರೀಲ್ಸ್ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದಾರೆ.
Highlighting the real-life consequences of reel culture:
In Ghaziabad, a woman was getting a reel made on the road when a bike-riding miscreant stole her chain and fled.
— Divya Gandotra Tandon (@divya_gandotra) March 24, 2024


