Top Newsರಾಜ್ಯಸುದ್ದಿ

ಜಾತಿನಿಂದನೆ ಪದ ಬಳಕೆ-PSI ಗಂಗಮ್ಮ ಅಮಾನತು!

ಕಲಬುರಗಿ: ಎರಡು ಕುಟುಂಬದ ಮಧ್ಯೆ ತಲೆದೋರಿದ ಜಮೀನು ವಿವಾದ ಇತ್ಯರ್ಥಪಡಿಸುವ ಮಾತುಕತೆ ವೇಳೆ ಪರಿಶಿಷ್ಟ ಸಮುದಾಯದ ಕುರಿತು ಹಗುರವಾಗಿ ಮಾತನಾಡಿದ ಜಿಲ್ಲೆಯ ರಟಕಲ್ ಪೊಲೀಸ್ ಠಾಣೆಯ ಪಿಎಸ್‌ಐ ಗಂಗಮ್ಮ ಅಮಾನತುಗೊಂಡಿದ್ದಾರೆ.

ಎರಡು ಕುಟುಂಬದ ಮಧ್ಯೆ ತಲೆದೋರಿದ ಜಮೀನು ವಿವಾದ ಇತ್ಯರ್ಥಪಡಿಸುವ ಮಾತುಕತೆ ವೇಳೆ ಪರಿಶಿಷ್ಟ ಸಮುದಾಯದ ಕರಿತು ಹಗುರವಾಗಿ ಮಾತನಾಡಿದ ಹಿನ್ನೆಲೆ ಜಿಲ್ಲೆಯ ರಟಕಲ್ ಠಾಣೆಯ ಪಿಎಸ್​ಐ ಗಂಗಮ್ಮ ಅಮಾನತು ಮಾಡಲಾಗಿದೆ. ಸೇರಿ ಗ್ರಾಮದ ಅಣಬಸಪ್ಪಗೌಡ ಪಾಟೀಲ್ ಹಾಗೂ ಇತ್ಯರ್ಥಪಡಿಸಲು ಯತ್ನಸುತ್ತಿದ್ದರು. ಈ ವೇಳೆ ಪಿಎಸ್​ಐ ಗಂಗಮ್ಮ ಉಭಯ ಕುಟುಂಬ ಸದಸ್ಯರನ್ನು ಉದ್ದೇಶಿಸಿ ಪರಿಶಿಷ್ಟ ಸಮುದಾಯವನ್ನು ನಿಂದಿಸುವ ಪದ ಬಳಸಿದ್ದಾರೆ. ಈ ಕುರಿತು ವಿಡಿಯೋ ವೈರಲ್ ಆಗಿತ್ತು.

ಈ ವಿಡಿಯೋ ತುಣುಕು ಗಮನಿಸಿದ ಭಾರತೀಯ ದಲಿತ ಪ್ಯಾಂಥರ್ ಮತ್ತು ದಲಿತ ಸೇನೆ ಪದಾಧಿಕಾರಿಗಳು ಚಿಂಚೋಳಿ ಡಿವೈಎಸ್ಪಿ ಹಾಗೂ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಸತ್ಯಾಸತ್ಯತೆ ಪರಿಶೀಲಿಸಿದ ಈಶಾನ್ಯ ವಲಯ ಐಜಿಪಿ ಅಜಯ್ ಹಿರೋಳಿ ಪಿಎಸ್‌ಐ ಗಂಗಮ್ಮ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Comments (0)

Your email address will not be published. Required fields are marked *

Back to top button