ಚಿಕ್ಕೋಡಿ : ಜೈನ ಧರ್ಮಿಯರ ಪ್ರಮುಖ ಏಳು ಬೇಡಿಕೆಗಳಿಗೆ ಸರಕಾರ ಸ್ಪಂದಿಸದಿದ್ದಲ್ಲಿ ಮುಂಬರುವ ಅಧಿವೇಶನದ ವೇಳೆ ವಿಧಾನಸೌಧದ ಎದುರು ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ರಾಷ್ಟ್ರಸಂತ ಗುಣಧರನಂದಿ ಮುನಿಶ್ರೀ ಎಚ್ಚರಿಕೆ.
ಗುಣಧರನಂದಿ ಮಹಾರಾಜರ 33ನೇ ದೀಕ್ಷಾ ಜಯಂತಿ ನಿಮಿತ್ತ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಶಮನೇವಾಡಿಯಲ್ಲಿ ಆಯೋಜಿಸಿದ್ದ ಜೈನ ಸಮ್ಮೇಳನದಲ್ಲಿ ಅವರು ಮಾತನಾಡಿದರು. ತಮ್ಮ ಸಮಾಜದ ಪರವಾಗಿ ಪ್ರಮುಖ ಏಳು ಬೇಡಿಯನ್ನು ಇಟ್ಟರು.
1 – ಜೈನ ಧರ್ಮದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು,
2 – ಪ್ರತಿ ಜಿಲ್ಲೆಯಲ್ಲಿ ಜೈನ ವಸತಿಗೃಹ ನಿರ್ಮಿಸಬೇಕು.
3 – ಬಡವರಿಗೆ ಉಚಿತ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆಗಳನ್ನು ನಿರ್ಮಿಸಬೇಕು,
4 – ಪ್ರತಿ ಹಳ್ಳಿಗಳಲ್ಲಿ ಮುನಿ ನಿವಾಸ, ಮಂಗಲ ಕಾರ್ಯಾಲಯ ನಿರ್ಮಿಸಬೇಕು,
5 – ಜೈನ ಅಭಿವೃದ್ಧಿ ನಿಗಮ ಸ್ಥಾಪಿಸಿಬೇಕು
6 – ಮುನಿಗಳ ರಕ್ಷಣೆ ಮಾಡಬೇಕು.
7 – ಬಡವರಿಗೆ ಶಿಖರಜಿಗೆ ಹೊಗಲು ಅನುದಾನ ನಿಡಬೇಕು,
ಪ್ರಮುಖ ಏಳು ಬೇಡಿಕೆಗಳಿಗೆ ಸರಕಾರ ಆದಷ್ಟೂ ಬೇಗ ಸ್ಪಂದಿಸಬೇಕು ಎಂದು ಗುಣಧರನಂದಿ ಮುನಿಶ್ರೀಗಳು ಹಕ್ಕೊತ್ತಾಯ ಮಂಡಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಜ್ಞಮತಿ ಮಾತಾಜಿ, ಭಟಾರಕರು, ರಾವಸಾಹೇಬ ಪಾಟೀಲ, ಉತ್ತಮ ಪಾಟೀಲ, ಡಾ ಪದ್ಮರಾಜ ಪಾಟೀಲ ಹಾಗೂ ಕ15 ಸಾವಿರಕ್ಕೂ ಅಧಿಕ ಶ್ರಾವಕ, ಶ್ರಾವಕಿಯರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.