Thursday, January 29, 2026
18 C
Bengaluru
Google search engine
LIVE
ಮನೆದೇಶ/ವಿದೇಶಥಮ ಚಿತ್ರದ ಮೂಲಕ ಮತ್ತೆ ಸಕ್ಸಸ್​ ಕಂಡ ರಶ್ಮಿಕಾ ಮಂದಣ್ಣ

ಥಮ ಚಿತ್ರದ ಮೂಲಕ ಮತ್ತೆ ಸಕ್ಸಸ್​ ಕಂಡ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ, ಆಯುಷ್ಮಾನ್​​ ಖುರಾನಾ ನಟನೆಯ ಥಮ ಸಿನಿಮಾ ಅಕ್ಟೋಬರ್​​​ 21 ರಂದು ಭರ್ಜರಿಯಾಗಿ ರಿಲೀಸ್​ ಆಗಿದೆ.. ಥಮ ಚಿತ್ರದಿಂದ ರಶ್ಮಿಕಾ ಮಂದಣ್ಣ ಮತ್ತೆ ಸಕ್ಸಸ್​ ಕಂಡಿದ್ದು, ಸಿನಿಮಾ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಗಳಿಕೆ ಮಾಡಿದೆ.

ಆದಿತ್ಯ ಸರ್ಪೋತ್ದಾರ್ ಥಮ ಚಿತ್ರವನ್ನು ನಿರ್ದೇಶಿಸಿದ್ದಾರೆ. ಆದಿತ್ಯ ಇದಕ್ಕೂ ಮುಂಚೆ ಮುಂಜ್ಯ, ಕುಕುಡ ರೀತಿಯ ಹಾರರ್ ಸಿನಿಮಾಗಳನ್ನು ನಿರ್ದೇಶಿಸಿದ ಆದಿತ್ಯ ಸರ್ಪೋತ್​ದಾರ್ ಅವರು ಥಾಮಾ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರವನ್ನು ಹಾರರ್ ಕಾಮಿಡಿ ಸಿನಿಮಾಗಳನ್ನು ನಿರ್ಮಿಸಿ ಗಮನ ಸೆಳೆದ ದಿನೇಶ್ ವಿಜನ್ ಅವರ ಮ್ಯಾಡಾಕ್ ನಿರ್ಮಾಣ ಮಾಡಿದೆ. ರಶ್ಮಿಕಾ ಇದರಿಂದ ಗೆದ್ದಿದ್ದಾರೆ. ಇನ್ನು ಥಮ ಚಿತ್ರ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಇದರ ಜೊತೆಗೆ ಒಂದು ಲವ್​ ಸ್ಟೋರಿ ಕೂಡ ಇದೆ. ಈ ಚಿತ್ರದ ಮೊದಲ ದಿನದ ಕಲೆಕ್ಷನ್ 24 ಕೋಟಿ ರೂಪಾಯಿ. ಮೊದಲ ದಿನವೇ ಸಿನಿಮಾ ಇಷ್ಟು ದೊಡ್ಡ ಕಲೆಕ್ಷನ್ ಮಾಡಿರುವುದರಿಂದ ಸಿನಿಮಾ ಗೆದ್ದಿರೋದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.

ರಶ್ಮಿಕಾ ಮಂದಣ್ಣ ಬಾಲಿವುಡ್​ನಲ್ಲಿ ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಅನಿಮಲ್, ಛಾವ ಸಿನಿಮಾಗಳು ಹಿಟ್​ ಆಗಿವೆ. ಸಿಕಂದರ್ ಸಿನಿಮಾ ಸಾಧಾರಣ ಎನಿಸಿಕೊಂಡಿತು. ಈಗ ಥಮ’ ಮೂಲಕ ರಶ್ಮಿಕಾ ಗೆದ್ದಿದ್ದಾರೆ. ಇತ್ತೀಚೆಗೆ ಸೋಲನ್ನೇ ಹೆಚ್ಚು ಕಂಡ ಆಯುಷ್ಮಾನ್ ಕೂಡ ಈ ಸಿನಿಮಾ ಮೂಲಕ ಗೆದ್ದಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments