ಬೆಂಗಳೂರು : ರಶ್ಮಿಕಾ ಮಂದಣ್ಣ…ಕೊಡಗಿನ ಕುವರಿ..ತೆಲುಗಿನ ಟಾಪ್ ನಟಿ… ಒಂದಿಲ್ಲೊಂದು ವಿವಾದಗಳ ಸುತ್ತ ಹೆಣೆದುಕೊಂಡೇ ಇರ್ತಾಳೆ.. 2016ರಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಕಿರಿಕ್ ಪಾರ್ಟಿ ಎಂಬ ಕನ್ನಡ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದರ್ಪಣೆ ಮಾಡಿದ ಈಕೆ ನಂತ್ರ ರಕ್ಷಿತ್ ಶೆಟ್ಟಿ ಜೊತೆಯೇ ವಿವಾಹವಾಗ್ತಾರೆ ಅನ್ನುವಷ್ಟು ಸುದ್ದಿಯಾದ್ರು.. ಕೊನೆಗೆ ಗಾಸಿಪ್ ಸುದ್ದಿಯನ್ನ ಸತ್ಯ ಮಾಡಿ 2017ರಲ್ಲಿ ನಟ ರಕ್ಷಿತ್ ಶೆಟ್ಟಿಯೊಂದಿಗೆ ರಶ್ಮಿಕಾ ನಿಶ್ಚಿತಾರ್ಥ ಕೂಡ ಮಾಡಿಕೊಂಡರು. ಒಂದಷ್ಟು ದಿನ ಸುತ್ತಾಡಿದ ಜೋಡಿಯಲ್ಲಿ ಬಿರುಕು ಕಂಡಿತ್ತು.. 2018ರ ಸೆಪ್ಟಂಬರ್ ಹೊತ್ತಿಗೆ ಇಬ್ಬರೂ ದೂರಾ ದೂರಾ ಎರಡು ತೀರ ಆದರು.
ಬ್ರೇಕ್ ಅಪ್ ಬಳಿಕ ಅಂಜನಿಪುತ್ರ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಜೊತೆಯಾಗಿ ನಟಿಸಿದ್ದರು. ಚಮಕ್ ನಲ್ಲಿ ಗಣೇಶ್ ಗೆ ಜೋಡಿಯಾದ್ರು. ಬಳಿಕ ತೆಲುಗಿನ ಗೀತಾ ಗೋವಿಂದ ಚಿತ್ರದಲ್ಲಿ ವಿಜಯ್ ದೇವರಕೊಂಡರ ಜೊತೆ ತೆರೆ ಹಂಚಿಕಂಡಿದ್ರು.. ಈ ಸಿನಿಮಾದ ಕೆಲವು ದೃಶ್ಯಗಳು ಕಂಡಂತಹ ಅಭಿಮಾನಿಗಳು “ಮೇಡ್ ಫಾರ್ ಈಚ್ ಅದರ್” ಅಂತ ಹೇಳಿದ್ದರು, ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಸಂಬಂಧ ಹಾಳಾಗಲು ಈ ಸಿನಿಮಾನೇ ಕಾರಣ ಅಂತಲೂ ಸುದ್ದಿಯಾಯ್ತು.
2018 ರಲ್ಲಿ “ಯಜಮಾನ” ಮೂವಿಯಲ್ಲಿ ದರ್ಶನ್ಗೆ ನಾಯಕಿಯಾಗಿ ನಟಿಸಿದ್ದರು , ಅದೇ ವರ್ಷ ಧ್ರುವ ಸರ್ಜಾ ನಟನೆಯ “ಪೊಗರು” ಚಿತ್ರದಲ್ಲಿ ನಟಿಸಿದ್ದ ಮಂದಣ್ಣ ಮತ್ತೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿಲ್ಲ. 2019 ರಲ್ಲಿ ಮತ್ತೊಮ್ಮೆ ವಿಜಯ್ ದೇವರಕೊಂಡರ ಜೊತೆ “ಡಿಯರ್ ಕಾಮ್ರೇಡ್” ನಲ್ಲಿ ತೆರೆ ಹಂಚಿಕೊಂಡಿದ್ದ ರಶ್ಮಿಕಾಗೆ ದೇವರಕೊಂಡ ಸಾಥ್ ಸಿಕ್ಕಿತ್ತು, ಇಡೀ ತೆಲುಗು ಇಂಡಸ್ಟ್ರಿ ಅವರ ಪರ ನಿಂತಿತ್ತು.. ಯಶಸ್ಸಿನ ಮೆಟ್ಟಲುಗಳ ಜೊತೆ ಮುಂದೆ ನಡೆದ ಮಂದಣ್ಣ ಹಿಂದಿಯಲ್ಲಿ ಅಮಿತಾ ಬಚ್ಚನ್ ಜೊತೆ ಗುಡ್ ಬೈ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
2021 ರಲ್ಲಿ ತೆರೆಕಂಡ “ಪುಷ್ಪ” ಸಿನಿಮಾದಲ್ಲಿ ಅಲ್ಲು ಅರ್ಜುನ್ ರವರಿಗೆ ನಾಯಕಿಯಾಗಿದ ಮಂದಣ್ಣ, ತಮಿಳಿನ ವಿಜಯ್ ದಳಪತಿ ಜೊತೆಯಲ್ಲೂ ನಟಿಸಿದ್ದರು, ಮೊನ್ನೆಯಷ್ಟೇ ತೆರೆ ಕಂಡ “ಅನಿಮಲ್” ಚಿತ್ರದಲ್ಲಿ ಪ್ರಶಂಸೆಯ ಪಾತ್ರ ಗಿಟ್ಟಿಸಿದ್ದರು. ಇದೀಗ ತೆಲುಗು ಇಂಡಸ್ಟ್ರಿಯಲ್ಲಿ ಮಂದಣ್ಣ ಟಾಪ್ ನಟಿ.. ಇನ್ನು ಇದೇ ವೇಳೆ ವಿಜಯ್ ದೇವರಕೊಂಡ ಜೊತೆ ಮುಂದಿನ ತಿಂಗಳು ನಿಶ್ಚಿತಾರ್ಥ ಅನ್ನೊ ಸುದ್ದಿ ಕೂಡ ಹರಿದಾಡುತ್ತಿದೆ. ಈ ವಿಚಾರವಾಗಿ ಮಂದಣ್ಣ ಆಗಲಿ ವಿಜಯ್ ದೇವರಕೊಂಡ ಆಗಲಿ, ಮಾತಾಡುತ್ತಿಲ್ಲ…
“ಬಾಲಯ್ಯ” ಶೋನಲ್ಲಿ ರಶ್ಮಿಕಾ ಮಂದಣ್ಣ ಲವ್ ವಿಚಾರ ಲೀಕ್ ಮಾಡಲೆಂದೇ ರಣಬೀರ್ ಬಾಲಯ್ಯ ಅವರು ನಡೆಸಿಕೊಡುವ ‘ಅನ್ಸ್ಟಾಪೆಬಲ್ ವಿತ್ ಎನ್ಬಿಕೆ’ಶೋನಲ್ಲೂ ರಶ್ಮಿಕಾಗೆ ವಿಜಯ್ಗೆ ಕರೆ ಮಾಡುವಂತೆ ಕೋರಲಾಯ್ತು…. ರಶ್ಮಿಕಾ ಕರೆ ಮಾಡಿ ಲೌಡ್ ಸ್ಪೀಕರ್ ಇಟ್ಟಿದ್ದೀನಿ ಅಂತೇಳಿಯೇ ಹಲೋ ಅಂದಿದ್ರು.. ಆ ಕಡೆಯಿಂದ ವಿಜಯ್ ದೇವರಕೊಂಡ ‘ವಾಟ್ಸಪ್ ರೇ’ಅಂತಷ್ಟೆ ಹೇಳಿ ಸೈಲೆಂಟ್ ಆದ್ರು.. ಒಟ್ನಲ್ಲಿ ಇವರಿಬ್ಬರು ಸಂಸಾರದನೌಕೆ ಏರ್ತಾರೆ ಅನ್ನೋ ಗಾಸಿಪ್ ಹಬ್ಬಿದೆ.. ಸತ್ಯವಾದ್ರೂ ಅಚ್ಚರಿ ಇಲ್ಲ…ಇವಳನ್ನ ಸಿನಿಮಾಗೆ ಕರೆತಂದ ರಕ್ಷಿತ್ ಶೆಟ್ಟಿ ಮಾತ್ರ ಸಕ್ಸಸ್ ಸಿನಿಮಾಗಳತ್ತ ಚಿತ್ತ ವಹಿಸಿದ್ದಾರೆ.