#Exclusive NewsTop Newsಜಿಲ್ಲೆಫ್ರೀಡಂ ಟಿವಿ ವಿಶೇಷರಾಜಕೀಯವಿಶೇಷವೆಬ್ ಸ್ಟೋರೀಸ್ವೈರಲ್ ನ್ಯೂಸ್ಸುದ್ದಿ

ರೇಪ್ ಕೇಸ್: ಶಾಸಕ ಮುನಿರತ್ನ 10 ದಿನ ಕಾಲ ಎಸ್‌ಐಟಿ ವಶಕ್ಕೆ

ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ಶಾಸಕ ಮುನಿರತ್ನ ಅವರನ್ನು ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ವಿಶೇಷ ತನಿಖಾತಂಡದ (ಎಸ್‌ಐಟಿ) ವಶಕ್ಕೆನೀಡಿಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶಿಸಿದೆ. ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲೀಪುರ ಠಾಣೆ ಪೊಲೀಸರು ಆರೋಪಿ ಮುನಿರತ್ನ ಅವರನ್ನು ಬಂಧಿಸಿ ವಿಚಾರಣೆ ಮಾಡಿ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದ ಮುನಿರತ್ನ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲು ವಶಕ್ಕೆ ನೀಡುವಂತೆ ಕೋರಿ ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಬಾಡಿ ವಾರೆಂಟ್ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ಈ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯವು ಆರೋಪಿ ಮುನಿರತ್ನ ಅವರನ್ನು ಅ. 5ರವರೆಗೆ ಎಸ್‌ಐಟಿ ವಶಕ್ಕೆ ನೀಡಿತು

Comments (0)

Your email address will not be published. Required fields are marked *

Back to top button