ರಾಜಕೀಯರಾಜ್ಯಸುದ್ದಿ

ರನ್ಯಾ ರಾವ್ ಪ್ರಕರಣ ; ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಎಂಎಲ್​ಸಿ ಸಲೀಂ ಅಹ್ಮದ್

ಹುಬ್ಬಳ್ಳಿ: ನಟಿ ರನ್ಯಾ ರಾವ್ ಪ್ರಕರಣವನ್ನು ಇ.ಡಿ ಮತ್ತು ಇತರ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಸೂಕ್ತ ಕ್ರಮವಾಗಲಿದೆ. ಯಾವುದೇ ಪಕ್ಷದವರು ಇದ್ದರೂ ರಕ್ಷಣೆಗೆ ಯಾರು ಮುಂದಾಗಬಾರದು ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು.

ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಅವರು, ಸದ್ಯ ಪ್ರಕರಣ ತನಿಖಾ ಹಂತದಲ್ಲಿದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ. ಯಾವುದೇ ಪಕ್ಷದವರಿರಲಿ, ರಕ್ಷಣೆಗೆ ಯಾರೂ ಮುಂದಾಗಬಾರದು. ನಮ್ಮ‌ಪಕ್ಷದ ಯಾವ ಸಚಿವರು ಸಹ ಅವರಿಗೆ ಬೆಂಬಲ ನೀಡಿಲ್ಲ.‌ ಹಾಗೇನಾದರೂ ದಾಖಲೆಗಳಿದ್ದರೆ ಬಿಜೆಪಿ ಬಿಡುಗಡೆ ಮಾಡಲಿ. ತಪ್ಪಿತಸ್ಥರು ಯಾರೇ ಆಗುದ್ದರೂ ಶಿಕ್ಷೆಯಾಗಲೇಬೇಕು ಎಂದು ಹೇಳಿದರು

Comments (0)

Your email address will not be published. Required fields are marked *

Back to top button