ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ರಂಗ ಪಂಚಮಿ ಹಿನ್ನಲೇ ಪರಸ್ಪರ ಬಣ್ಣ ಎರಚಿ ಬಣ್ಣದ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.
ಅವಳಿನಗರದಲ್ಲಿ ಈ ಹಿಂದಿನಿಂದಲೂ ಆರು ದಿನಗಳ ಕಾಲ ಆಚರಣೆ ಮಾಡುತ್ತಾ ಬಂದಿದ್ದು, ಇಂದು ರಂಗ ಪಂಚಮಿ ಪ್ರಯುಕ್ತ ಗಲ್ಲಿ ಗಲ್ಲಿಯಲ್ಲೂ ಪ್ರತಿಷ್ಠಾಪನೆ ಮಾಡಲಾಗಿದ್ದ ಕಾಮದೇವರ ದಹನ ಮಾಡುವ ಮೂಲಕ ರಂಗ ಪಂಚಮಿ ರಂಗೇರಿತ್ತು. ರಂಗಪಂಚಮಿ ಹಿನ್ನಲೆ ವಾಣಿಜ್ಯ ನಗರಿಯಲ್ಲಿ ಬಣ್ಣದಾಟ ಸಾಕಷ್ಟು ಸಂಭ್ರಮಕ್ಕೆ ಸಾಕ್ಷಿಯಾಗಿದ್ದು, ಬಣ್ಣದೋಕಳಿಯಲ್ಲಿ ಜನರು ಮಿಂದೆದ್ದಿದ್ದಾರೆ. ಯುವ ಸಮೂಹ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿರುವುದು ವಿಶೇಷವಾಗಿದೆ. ಬಣ್ಣ ಹಚ್ಚಿಕೊಂಡು ಕುಣಿದು ಕುಪ್ಪಳಿಸಿದ ವಾಣಿಜ್ಯ ನಗರಿ ಜನ, ರೇನ್ ಡ್ಯಾನ್ಸ್ ಗೆ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಹುಬ್ಬಳ್ಳಿಯ ಬಿರು ಬಿಸಲಲ್ಲೂ ರಂಗೇರಿದ ಬಣ್ಣದಾಟದಲ್ಲಿ ಡಿಜೆ ಸದ್ದಿಗೆ ಸಖತ್ ಸ್ಟೇಫ್ ಹಾಕಿ ಅತ್ಯುತ್ಸಾಹದಲ್ಲಿ ಹೋಳಿ ಹಬ್ಬವನ್ನು ಆಚರಿಸಿ, ಸಂಭ್ರಮಿಸಿದ್ದಾರೆ.