#Exclusive NewsTop Newsಜಿಲ್ಲೆರಾಜ್ಯಸುದ್ದಿ

ರಾಮನಗರ ; ಮೈಕ್ರೋಫೈನಾನ್ಸ್ ಕಾಟಕ್ಕೆ ಕಿಡ್ನಿ ಮಾರಾಟ ಮಾಡಿದ ಮಹಿಳೆ

ರಾಜ್ಯದಲ್ಲಿ ಮೈಕ್ರೋಫೈನಾನ್ಸ್​ ಹಾವಳಿ ಹೆಚ್ಚಾಗಿದ್ದು ಕಂಪನಿಯ ಕಿರುಳಕ್ಕೆ ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಗ್ರಾಮ ತೊರೆದರೆ,ಕೊಡಗಿನಲ್ಲಿ ಮರವೇರಿ ಕುಳಿತು ಸಾಲಗಾರರಿಂದ ತಪ್ಪಿಸಿಕೊಂಡಿದ್ದಾರೆ.ಹಾವೇರಿ ಜಿಲ್ಲೆಯಲ್ಲಿ ಫೈನಾನ್ಸ್​ ನವರ ಕಾಟ ತಾಳಲಾರದೆ ಮುಖ್ಯಮಂತ್ರಿಗಳಿಗೆ ಮಾಂಗಲ್ಯ ಸರವನ್ನು ಪೋಸ್ಟ್​ ಮಾಡಿದ್ದಾರೆ.  ಆದರೆ ರಾಮನಗರ ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ.

ಸಾಲ ವಸೂಲಿಗಾಗಿ ಮೈಕ್ರೋ ಫೈನಾನ್ಸ್‌ ನವರು ನೀಡುವ ಕಿರುಕುಳ ತಾಳಲಾರದೆ ಮಾಗಡಿ ತಾಲೂಕಿನ ಕೆಲವು ಮಹಿಳೆಯರು ತಮ್ಮ ಕಿಡ್ನಿಗಳನ್ನೇ ಮಾರಾಟ ಮಾಡಿಕೊಳ್ಳುತ್ತಿರುವರೇ? ಇಂಥದ್ದೊಂದು ಆತಂಕಕಾರಿ ಬೆಳವಣಿಗೆ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ಅನುಮಾನಗಳು ಎದ್ದಿವೆ. ಈ ಕುರಿತು ಮಾಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಎರಡು ವರ್ಷದ ಹಿಂದೆಯೇ ಕಿಡ್ನಿ ಮಾರಾಟ ಮಾಡಿಕೊಂಡಿ ರುವ ಮಾಗಡಿಯ ಮಧ್ಯ ವಯಸ್ಸಿನ ಮಹಿಳೆಯೊಬ್ಬರು, ‘ಖಾಸಗಿಯವರ ಬಳಿ ಪಡೆದ ಸಾಲ ತೀರಿಸಲೆಂದೇ ಎರಡು ವರ್ಷಗಳ ಹಿಂದೆಯೇ ನಾನು ಕಿಡ್ಡಿ ಮಾರಾಟ ಮಾಡಿಕೊಂಡೆ. ಆಗ ನನಗೆ 2.5 ಲಕ್ಷರೂ. ಕೊಟ್ಟಿದ್ದರು. ಮಂಜಣ್ಣ ಎನ್ನುವವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಂದು ಹೊಲಿಗೆ ಹಾಕಿದ್ದು, ಅದನ್ನೂ ಇನ್ನೂ ಬಿಚ್ಚಿಲ್ಲ ಎಂದು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.ತನ್ನಚಿಕಿತ್ಸೆಯ ಕುರುಹಾಗಿ ತಮ್ಮ ದೇಹದಲ್ಲಿ ವಾಸಿಯಾಗದೇ ಉಳಿದಿರುವ ಗಾಯವನ್ನೂ ಅವರು ತೋರಿಸಿ, “ಕಿಡ್ನಿ ಮಾರಾಟ ಜಾಲ ಇರುವುದು ಸತ್ಯ,” ಎಂದು ಹೇಳಿದ್ದಾರೆ.

ಇಷ್ಟೆಲ್ಲಾ ಆದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಬಡವರ ಕಡೆ ಗಮನ ಹರಿಸುತ್ತಿಲ್ಲ. ಮುಖ್ಯಮಂತ್ರಿಗಳ ಪಕ್ಕದ ಹಳ್ಳಿಯಲ್ಲು ಸಹ ಮೈಕ್ರೋಫೈನಾನ್ಸ್​ ಬಿಸಿ ಮುಟ್ಟಿದರು ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ.

 

Comments (0)

Your email address will not be published. Required fields are marked *

Back to top button