Thursday, January 29, 2026
24.2 C
Bengaluru
Google search engine
LIVE
ಮನೆರಾಜ್ಯರಾಮೇಶ್ವರಂ ಕೆಫೆ ಸ್ಫೋಟ ಬೆನ್ನಲ್ಲೇ : 7 ರಾಜ್ಯಗಳಲ್ಲಿ NIA ದಾಳಿ 5 ಶಂಕಿತರು ಬಂಧನ

ರಾಮೇಶ್ವರಂ ಕೆಫೆ ಸ್ಫೋಟ ಬೆನ್ನಲ್ಲೇ : 7 ರಾಜ್ಯಗಳಲ್ಲಿ NIA ದಾಳಿ 5 ಶಂಕಿತರು ಬಂಧನ

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್​ ಬಾಸ್ಟ್ ಪ್ರಕರಣ ಬಳಿಕ NIA ತಂಡ ಚುರುಕುಗೊಂಡಿದ್ದು, ಸಂಚುಕೋರರಿಗಾಗಿ ತೀವ್ರ ತನಿಖೆ ನಡೆಸುತ್ತಿದೆ. ದೇಶದ್ಯಾಂತ 7 ರಾಜ್ಯಗಳಲ್ಲಿ 17 ಕಡೆ NIA ದಾಳಿ ಮಾಡಿದೆ.

ಬೆಂಗಳೂರಿನಲ್ಲೂ ಸಹ ಕಾರ್ಯಪ್ರವೃತ್ತರಾಗಿರುವ ಎನ್​ಐಎ ತಂಡ ಪರಪ್ಪನ ಅಗ್ರಹಾರ ಜೈಲಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಜೈಲಿನಲ್ಲಿ ಉಗ್ರವಾದಕ್ಕೆ ಪ್ರೇರೇಪಿಸುತ್ತಿದ್ದ ಪ್ರಕರಣದಲ್ಲಿ ಒಟ್ಟು 17 ಕಡೆ ದಾಳಿ ನಡೆಸಿದ್ದು, ಆರ್ ಟಿ ನಗರ ಸೇರಿ ಬೆಂಗಳೂರಿನಲ್ಲಿ ನಾಲ್ಕು ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು ಜೀವಂತ ಗ್ರನೇಡ್ ಹಾಗೂ ಜೀವಂತ ಗುಂಡುಗಳು ಸಿಕ್ಕಿದ್ದ ಪ್ರಕರಣ ಸಂಬಂಧಿಸಿದಂತೆ ಕೂಡ ದಾಳಿ ನಡೆಸಿ ತನಿಖೆ ಕೈಗೊಂಡಿರುವ ಅಧಿಕಾರಿಗಳು ಆರ್ ಟಿ ನಗರದ ಟಿ ನಝೀರ್ ಸಂಬಂಧಿತ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಸುಲ್ತಾನ್ ಪಾಳ್ಯದಲ್ಲೂ NIA ಪರಿಶೀಲಿಸಿದ್ದಾರೆ ಟಿ ನಝೀರ್ ಜೊತೆ ಸಂಪರ್ಕ ಹಾಗು ಐಸೀಸ್ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಹಿನ್ನಲೆ ಈ ದಾಳಿ ನಡೆದಿದೆ. ಚೆನ್ಬೈನ ರಾಮನಾಥಪುರಂ ಜಿಲ್ಲೆಯ ಕೀಲಕಾರೈ ಏರಿಯಾ ಬಳಿ ಇರುವ ಶಂಶುದ್ದಿನ್ ಎಂಬಾತನ ಮನೆ ಮೇಲೆ ದಾಳಿ ನಡೆದಿದೆ.

ಟಿ ನಝೀರ್ ಬ್ರೇನ್ ವಾಶ್ ಮಾಡಿ ಉಗ್ರವಾದಕ್ಕೆ ಪ್ರಚೋದನೆ ನೀಡುತ್ತಿದ್ದ ಶಂಕಿತ ಉಗ್ರನಾಗಿದ್ದು, ಈತನ ಸಂಪರ್ಕದಲ್ಲಿರುವ ಜುನೈದ್ ಎಂಬಾತ ಪರಾರಿಯಾಗಿದ್ದನು. ಜುನೈದ್ ಎಂಬಾತ‌ ಗ್ರೇನೆಡ್​ ಸಿಕ್ಕ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದನು. ಅಲ್ಲದೆ ಆತನ ಮೇಲೆ ಹವಾಲಾ ಆರೋಪ ಕೇಳೀಬಂದಿತ್ತು.ಹೀಗಾಗಿ ರಾಮೇಶ್ವರಂ ಕೆಫೆ ದಾಳಿಯಲ್ಲೂ ಆತನ ಪಾತ್ರ ಇರಬಹುದು ಎಂದು NIA ಅಧಿಕಾರಿಗಳು ದಾಳಿ ನಡೆಸಿ ತನಿಖೆ ಮುಂದುವರೆಸಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments