ಬೆಳಗಾವಿ: ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಏಕವಚನದಲ್ಲೇ ವಿಜಯೇಂದ್ರ ವಿರುದ್ಧವೇ ಗುಡುಗಿದ್ದಾರೆ.
ಗೋಕಾಕ್‌ನ ಅಂಕಲಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಜಗಳ ಇದೆ. ಅದು ಕೇವಲ ಅಧ್ಯಕ್ಷ ಸ್ಥಾನ ಬದಲಾವಣೆಗಾಗಿ ಮಾತ್ರ. ಅಧ್ಯಕ್ಷ ಸ್ಥಾನ ಬದಲಾವಣೆಗೆ ಆಗದಿದ್ದರೂ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.
ಬಸನಗೌಡ ಪಾಟೀಲ್ ಮತ್ತು ಜಾರಕಿಹೊಳಿ ವಿಜಯೇಂದ್ರ ವಿರುದ್ಧ ಬೆಂಕಿಯುಗುಳುತ್ತಿದ್ದಾರೆ. ಓಡಾಡುವುದು ಕಷ್ಟವಾಗುತ್ತೆ ಅಂತ ವಿಜಯೇಂದ್ರ ಜಾರಕಿಹೊಳಿಗೆ ಹೇಳಿದ್ದು ಇಬ್ಬರಿಗೂ ಸಹ್ಯವಾಗುತ್ತಿಲ್ಲ. ತಾನು ಶಿಕಾರಿಪುರಕ್ಕೆ ಹೋಗಿ ವಿಜಯೇಂದ್ರ ಮನೆ ಮುಂದಿನಿಂದಲೇ ರಾಜ್ಯ ಪ್ರವಾಸ ಶುರುಮಾಡುತ್ತೇನೆ, ತಾನೊಬ್ಬನೇ ಅಲ್ಲಿಗೆ ಹೋಗುತ್ತೇನೆ, ದಿನಾಂಕವನ್ನು ವಿಜಯೇಂದ್ರನೇ ನಿಗದಿ ಮಾಡಲಿ ಎಂದು ಜಾರಕಿಹೊಳಿ ಸವಾಲೆಸೆದರು.