ಸಿನಿಮಾ

‘ಟಾಕ್ಸಿಕ್’ ಬೆನ್ನಲ್ಲೇ ರಾಮಾಯಣ ಧಮಾಕ; ಮಾರ್ಚ್ 26ಕ್ಕೆ ಬೃಹತ್ ಸಮಾರಂಭ!

ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ತೆರೆಕಾಣಲಿದ್ದು, ಅದರ ಬೆನ್ನಲ್ಲೇ ಮಾರ್ಚ್ 26ರ ರಾಮನವಮಿಯಂದು ‘ರಾಮಾಯಣ’ ಚಿತ್ರದ ಪಾತ್ರಗಳನ್ನು ಅಧಿಕೃತವಾಗಿ ಪರಿಚಯಿಸುವ ಬೃಹತ್ ಸಮಾರಂಭ ಆಯೋಜನೆಯಾಗಿದೆ. ಮುಂಬೈನ ಪ್ರಸಿದ್ಧ ಗೇಟ್-ವೇ ಆಫ್ ಇಂಡಿಯಾದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ರಾಜಕೀಯ, ಸಿನಿಮಾ ಮತ್ತು ಕ್ರೀಡಾ ಕ್ಷೇತ್ರದ ದಿಗ್ಗಜರು ಸಾಕ್ಷಿಯಾಗಲಿದ್ದಾರೆ. ಈ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಪಾಲ್ಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಈ ‘ಮದರ್ ಆಫ್ ಆಲ್ ಈವೆಂಟ್ಸ್’ನಲ್ಲಿ ರಾವಣನ ಪಾತ್ರಧಾರಿ ಯಶ್, ಶ್ರೀರಾಮನಾಗಿ ರಣಬೀರ್ ಕಪೂರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ಸೇರಿದಂತೆ ಇಡೀ ತಾರಾಗಣವನ್ನು ಅಧಿಕೃತವಾಗಿ ಜಗತ್ತಿಗೆ ಪರಿಚಯಿಸಲಾಗುವುದು. ‘ಟಾಕ್ಸಿಕ್’ ಬಿಡುಗಡೆಯಾದ ಕೇವಲ ಒಂದು ವಾರದಲ್ಲೇ ಈ ಬೃಹತ್ ಘೋಷಣೆ ಹೊರಬೀಳುತ್ತಿರುವುದು ಅಭಿಮಾನಿಗಳಲ್ಲಿ ಸಖತ್ ಕುತೂಹಲ ಮೂಡಿಸಿದೆ. ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಈ ದಿನವನ್ನು ಅತ್ಯಂತ ವಿಶೇಷವಾಗಿಸಲು ಸಕಲ ಸಿದ್ಧತೆ ನಡೆಸಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯ ಆಧಾರಿತ ಸಿನಿಮಾದಲ್ಲಿ ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಗ್ರಾಫಿಕ್ಸ್ ಪೋಸ್ಟರ್‌ಗಳ ಬದಲಾಗಿ, ಈ ಬಾರಿ ನಟರು ತಮ್ಮ ಪಾತ್ರಗಳ ಲುಕ್‌ನಲ್ಲಿ ನೇರವಾಗಿ ಕಾಣಿಸಿಕೊಳ್ಳುವುದು ಈ ಕಾರ್ಯಕ್ರಮದ ವಿಶೇಷತೆ. ರಣಬೀರ್ ಕಪೂರ್ ಅವರು ವೈಯಕ್ತಿಕವಾಗಿ ಅನೇಕ ಬಾಲಿವುಡ್ ಗಣ್ಯರಿಗೆ ಆಹ್ವಾನ ನೀಡಿದ್ದು, ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕಾರ್ಯಕ್ರಮಗಳಲ್ಲಿ ಒಂದಾಗುವ ನಿರೀಕ್ಷೆಯಿದೆ.

Comments (0)

Your email address will not be published. Required fields are marked *

Back to top button